ಬೆಂಗಳೂರು: ದತ್ತು ಮಕ್ಕಳು ಕೂಡ ಅನುಕಂಪದ ನೌಕರಿ ಪಡೆಯಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ.
ನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ವ್ಯತ್ಯಾಸವಿಲ್ಲ. ವ್ಯತ್ಯಾಸ ಮಾಡಿದರೆ ದತ್ತು ತೆಗೆದುಕೊಳ್ಳುವ ಉದ್ದೇಶ ನಿರರ್ಥಕವಾಗಲಿದೆ ಎಂದು ಹೈಕೋರ್ಟ್ ಹೇಳಿದೆ. ನ್ಯಾ. ಸೂರಜ್ ಗೋವಿಂದರಾಜ್, ನ್ಯಾ. ಜಿ, ಬಸವರಾಜ್ ಅವರಿದ್ದ ಪೀಠ ಆದೇಶ ನೀಡಿದೆ.
ಗಿರೀಶ್, ವಿನಾಯಕ ಮುತ್ತತ್ತಿ ಎಂಬುವರ ದತ್ತುಪುತ್ರ ಆಗಿದ್ದಾರೆ. ಅಭಿಯೋಜನೆ ವಿಭಾಗದಲ್ಲಿ ವಿನಾಯಕ ಮುತ್ತತ್ತಿ ದಲಾಯತ್ ಆಗಿದ್ದರು. 2010ರಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ನೌಕರರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ದತ್ತು ಪುತ್ರನೆಂಬ ಕಾರಣಕ್ಕೆ ಅನುಕಂಪದ ನೌಕರಿ ನಿರಾಕರಿಸಲಾಗಿತ್ತು. ವಿಚಾರಣೆ ಆಲಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 12 ವಾರದಲ್ಲಿ ಅನುಕಂಪದ ಹುದ್ದೆ ಕೋರಿದ ಅರ್ಜಿಯನ್ನು ಪರಿಗಣಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.