![](https://kannadadunia.com/wp-content/uploads/2020/10/5a078ca9fc7e93bb4d8b4567.jpg)
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ವೈದ್ಯರು ಕೊಡುವ ಮಾತ್ರೆಗಳ ಹೊರತಾಗಿಯೂ ಅನ್ಯ ಮಾರ್ಗವಿದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ದೂರ ಮಾಡಬಹುದು.
ನಿತ್ಯ 45 ನಿಮಿಷದಿಂದ ಒಂದು ಗಂಟೆಯ ಅವಧಿಯನ್ನು ವ್ಯಾಯಾಮ, ವಾಕಿಂಗ್ ಹಾಗೂ ಯೋಗಕ್ಕೆ ಮೀಸಲಿಡಿ. ಇದರಿಂದ ನಿಮ್ಮ ದೇಹದ ಬೆವರಿದರೆ ಸಾಕು. ನಿತ್ಯ ದೇಹ ದಂಡಿಸುವುದರಿಂದ ಆಕರ್ಷಕ ದೇಹಾಕೃತಿ ನಿಮ್ಮದಾಗುತ್ತದೆ. ಮಾತ್ರವಲ್ಲ ಜಡತ್ವವೂ ದೂರವಾಗುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಿದಂತೆ ಬೊಜ್ಜು ಅಧಿಕವಾಗಿ, ಸ್ನಾಯುಗಳ ಶಕ್ತಿ ಕುಂಠಿತಗೊಳ್ಳುತ್ತದೆ. ಇದನ್ನು ತಡೆಯಲು ಕಡ್ಡಾಯವಾಗಿ ಕರಿದ ಅಥವಾ ಹುರಿದ ಆಹಾರವನ್ನು ತ್ಯಜಿಸಬೇಕು. ಮೀನು, ಆಲಿವ್, ಡ್ರೈಫ್ರುಟ್ ಹೆಚ್ಚು ಸೇವಿಸಿ. ನಾರಿನಂಶ ಹೊಂದಿರುವ ಹಣ್ಣು, ತರಕಾರಿ, ಧಾನ್ಯ, ಬೀಜಗಳನ್ನು ಸೇವಿಸಿ.
ಇದರಿಂದ ದೇಹದ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಹೃದಯದ ಆರೋಗ್ಯವನ್ನೂ ಕಾಪಾಡುವ ಈ ವಸ್ತುಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಶಾಶ್ವತ ಪರಿಹಾರ ಪಡೆಯಬಹುದು.