
ಕಲೆ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇರುವವರು ಒಮ್ಮೆ ತಂಜಾವೂರಿಗೆ ಭೇಟಿ ನೀಡಲೇಬೇಕು. ತಂಜಾವೂರು ತಮಿಳುನಾಡಿನ ಐತಿಹಾಸಿಕ ಪಟ್ಟಣ. ಒಮ್ಮೆ ಇಲ್ಲಿಗೆ ನೀಡಿದರೆ ತಂಜಾವೂರಿನ ಶಿಲ್ಪಕಲೆಯ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು. ಪ್ರವಾಸ ಪ್ರಿಯರಿಗೆ ಇಲ್ಲಿನ ಶಿಲ್ಪಕಲೆಯು ರಸದೌತಣವನ್ನು ಉಣಬಡಿಸುತ್ತದೆ.
ಬೃಹದೀಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ವಿಶ್ವಪರಂಪರೆಯ ಪಟ್ಟಿಯಲ್ಲಿ ಇದು ಸ್ಥಾನ ಪಡೆದಿದೆ. ಹಾಗೇ ಸುಂದರ ಶಿಲ್ಪಕಲೆಗೆ ಇದು ಹೆಸರುವಾಸಿಯಾಗಿದೆ.
ಒಂದನೇ ರಾಜರಾಜ ಚೋಳನು ಕ್ರಿ.ಶ. 1010ರಲ್ಲಿ ಈ ದೇಗುಲವನ್ನು ನಿರ್ಮಿಸಿದ್ದಾನೆ. ತಮಿಳುನಾಡಿನಲ್ಲಿ ಇದು “ದಕ್ಷಿಣ ಮೇರು’ ಎಂದೇ ಪ್ರಸಿದ್ಧಿ ಹೊಂದಿದೆ.
ಯುನೆಸ್ಕೋದ ವರ್ಲ್ಡ್ ಹೆರಿಟೇಜ್ ಸೈಟ್ನಲ್ಲಿ ಗ್ರೇಟ್ ಲಿಂಗ್ ಚೋಳ ಟೆಂಪಲ್ ಎಂಬ ಬಿರುದಾಂಕಿತವನ್ನು ಇದು ಹೊಂದಿದೆ. ಬೆಂಗಳೂರಿನಿಂದ ತಂಜಾವೂರಿಗೆ 415 ಕಿ.ಮೀ. ದೂರ. ಹಾಗೇ ಇಲ್ಲಿ ಭೇಟಿ ನೀಡಿದರೆ ಸನಿಹದಲ್ಲಿರುವ ಧರಸುರಂ, ಚಿದಂಬರಂ ಕೂಡ ನೋಡಬಹುದು.