![Aditi Rao Hydari Age, Husband, Height, Biography, Movies - BREEZEMASTI](https://www.breezemasti.com/wp-content/uploads/Aditi-Rao-Hydari-wiki-age-husband-height-biography-movies.jpg)
ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಸೆಲೆಬ್ರೇಟ್ ಮಾಡಿದ್ದಾರೆ.
2006ರಲ್ಲಿ ತೆರೆ ಕಂಡ ಮಲಯಾಳಂನ ‘ಪ್ರಜಾಪತಿ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು 2007 ರಲ್ಲಿ ತಮಿಳಿನ ಶೃಂಗಾರಂ ಸಿನಿಮಾದಲ್ಲಿ ತೆರೆ ಹಂಚಿಕೊಂಡರು. ನಟಿ ಅದಿತಿ ರಾವ್ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಚಿತ್ತರಂಗದಲ್ಲೂ ಅಭಿನಯಿಸಿದ್ದಾರೆ.
ಕಳೆದ ವರ್ಷ ‘ಹೇ ಸಿನಾಮಿಕಾ’ ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದ ಇವರು ಇತ್ತೀಚಿಗೆ ‘ಗಾಂಧಿ ಟಾಕ್ಸ್’ ಮತ್ತು ‘ಲಯನೆಸ್’ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿಮಾ ಕಲಾವಿದರು ಶುಭಾಶಯ ತಿಳಿಸಿದ್ದಾರೆ.
![](https://kannadadunia.com/wp-content/uploads/2023/10/8b31e805-1953-413c-93eb-01374ae07454-400x501.jpg)