alex Certify ಟೋಕಿಯೋ ಒಲಿಂಪಿಕ್​ ಪಂದ್ಯಕ್ಕೂ ಮುನ್ನವೇ ಸಾಧನೆ ಮಾಡಿದ್ದಾರೆ ಈ ಕನ್ನಡತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್​ ಪಂದ್ಯಕ್ಕೂ ಮುನ್ನವೇ ಸಾಧನೆ ಮಾಡಿದ್ದಾರೆ ಈ ಕನ್ನಡತಿ….!

ಟೋಕಿಯೋ ಒಲಿಂಪಿಕ್​ 2020ರಲ್ಲಿ ಸ್ಥಾನ ಪಡೆದ 120 ಆಟಗಾರರ ಪೈಕಿ ಅದಿತಿ ಅಶೋಕ್​ ಕೂಡ ಒಬ್ಬರಾಗಿದ್ದಾರೆ. ಬೆಂಗಳೂರು ಮೂಲದ ಈ ಕನ್ನಡತಿ ಟೋಕಿಯೋ ಒಲಿಂಪಿಕ್ಸ್​ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್​ ಎನಿಸಿಕೊಂಡಿದ್ದಾರೆ.

ವಿಶ್ವಶ್ರೇಯಾಂಕಿತರ ಪಟ್ಟಿಯಲ್ಲಿ 45ನೇ ಸ್ಥಾನದಲ್ಲಿರುವ ಅದಿತಿಗೆ ಇದು ಮೊದಲ ಒಲಿಂಪಿಕ್​ ಅಲ್ಲ. ಇವರು 2016ರ ರಿಯೋ ಒಲಿಂಪಿಕ್ಸ್​ನಲ್ಲಿಯೂ ಭಾರತ ತಂಡವನ್ನ ಪ್ರತಿನಿಧಿಸಿದ್ದರು. ಇದೀಗ ಎರಡನೇ ಬಾರಿಗೆ ಒಲಿಂಪಿಕ್ಸ್​​ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅದಿತಿ ಸಜ್ಜಾಗಿದ್ದಾರೆ.

ಪಂಡಿತ್​ ಗುಡ್ಲಮಣಿ ಅಶೋಕ್​ ಹಾಗೂ ಮಾಶ್​ ಅಶೋಕ್​ ದಂಪತಿಯ ಪುತ್ರಿ ಅದಿತಿ ಅಶೋಕ್​​ 1998 ಮಾರ್ಚ್​ 29ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ರು. ವೃತ್ತಿಪರ ಗಾಲ್ಫರ್​ ಆಗಿರುವ ಅದಿತಿ ತಮ್ಮ 5ನೇ ವರ್ಷದಿಂದಲೇ ಗಾಲ್ಫ್​​​ ಅಭ್ಯಾಸವನ್ನ ಶುರು ಮಾಡಿದ್ದರು. 2016ರಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ ಮಹಿಳೆಯರ ಯುರೋಪಿಯನ್ ಟೂರ್ ಹಾಗೂ ಎಲ್​ಪಿಜಿಎ ಪ್ರವಾಸದಲ್ಲಿಯೂ ಭಾಗಿಯಾದ ಆಟಗಾರ್ತಿಯಾಗಿದ್ದಾರೆ.

ಅದಿತಿ ಅಶೋಕ್​ ಲಲ್ಲಾ ಐಚಾ ಟೂರ್​ ಸ್ಕೂಲ್​​ ವಿಜೇತಳಾದ ಭಾರತದ ಮೊದಲ ಹಾಗೂ ಕಿರಿಯ ಆಟಗಾರ್ತಿ ಎನಿಸಿದ್ದಾರೆ. ಅಲ್ಲದೇ ಏಷಿಯನ್​ ಯೂತ್​ ಗೇಮ್ಸ್​ (2013)ರಲ್ಲಿ ಗಾಲ್ಫ್​​ ಆಟವಾಡಿದ ಏಕೈಯ ಭಾರತೀಯ ಎಂಬ ಹೆಗ್ಗಳಿಕೆ ಕೂಡ ಇವರದ್ದಾಗಿದೆ. ಭಾರತೀಯ ಸರ್ಕಾರ ಅದಿತಿ ಅಶೋಕ್​​ರ ಸಾಧನೆಯನ್ನ ಗೌರವಿಸಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...