ಅರುಣ್ ರಾಥೋಡ್ ನಿರ್ದೇಶನದ ‘ಅದೀರ’ ಎಂಬ ಆಕ್ಷನ್ ಥ್ರಿಲ್ಲರ್ ಕಿರುಚಿತ್ರವನ್ನು ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಕಿರು ಚಿತ್ರ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದ್ದು, ಒಂದು ಒಳ್ಳೆಯ ಸಿನಿಮಾ ರೀತಿಯಲ್ಲಿ ಮೂಡಿ ಬಂದಿದೆ ಎಂದಿದ್ದಾರೆ.
ಈ ಶಾರ್ಟ್ ಫಿಲಂ ನಲ್ಲಿ ಆಕಾಶ್ ಕಟ್ಟಿಮನಿ ಸೇರಿದಂತೆ ಸ್ವಾತಿ ನಿತಿನ್, ವೀರೇಶ್, ಮುದ್ದ, ನಾಗರಾಜ್ ಅಭಿನಯಿಸಿದ್ದು, ಕಸ್ತೂರಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.
ದೇವರಾಜ್ ಸಂಕಲನ, ಛೋಟಾ ಗಣೇಶ್ ಛಾಯಾಗ್ರಹಣವಿದೆ. ಮಧು ಕುಮಾರ್ ಸಹ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.