ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ್’ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರದ ನಿರ್ದೇಶಕ ಓಂ ರೌತ್ ಅವರು ರಾಮಾಯಣವನ್ನು ತಮ್ಮ ಸ್ವಂತ ಕಲ್ಪನೆಗೆ ಅನುಗುಣವಾಗಿ ಚಿತ್ರಿಸಿದ್ದಕ್ಕಾಗಿ ತೀವ್ರವಾಗಿ ಟೀಕೆಗಳು ವ್ಯಕ್ತವಾಗುತ್ತಿದೆ . ನಾಯಕಿ, ಸೀತೆ ಪಾತ್ರದಲ್ಲಿ ಕೃತಿ ಸನೋನ್ ಹೊರತುಪಡಿಸಿ, ಬಹುತೇಕ ಎಲ್ಲಾ ಪಾತ್ರಗಳು ಮತ್ತು ದೃಶ್ಯಗಳು ಟ್ರೋಲ್ ಆಗುತ್ತಿವೆ. , ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಿಸಿ ಬಹುಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಕೂಡ ಗ್ರಾಫಿಕ್ಸ್ ಯಾಕೆ ಇಷ್ಟು ಕಳಪೆ ಆಗಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಕೂಡ ಚಿತ್ರ ಭಾರಿ ಟ್ರೋಲ್ ಗೆ ಗೆ ಈಡಾಗಿತ್ತು, ಈಗ ಸಿನಿಮಾ ರಿಲೀಸ್ ಆದ ಮೇಲೂ ಕೂಡ ಸಿನಿಮಾ ಭಾರಿ ಟ್ರೋಲ್ ಗೆ ಕಾರಣವಾಗಿದೆ.
ರಾಮನಾಗಿ ಪ್ರಭಾಸ್ ಕೂಡ ಪರದೆಯ ಮೇಲಿನ ಅನೇಕ ದೃಶ್ಯಗಳಲ್ಲಿ ವಿಚಿತ್ರವಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಚಿತ್ರದ ಕೆಲವು ಶಾಟ್ ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಟ್ರೋಲ್ ಮಾಡಿದ್ದಾರೆ, ಇದರಲ್ಲಿ ಪ್ರಭಾಸ್ ಆಕಾರ ಕಳೆದುಕೊಂಡಂತೆ ಕಾಣುತ್ತಾರೆ. ರಾವಣನ ಪಾತ್ರ, ಅವನ ಮಗ ಇಂದ್ರಜಿತ್ ಮತ್ತು ಇತರ ಎಲ್ಲಾ ಲಂಕಾ ಸೈನ್ಯದ ನೋಟಗಳು ಮತ್ತು ವಿನ್ಯಾಸಗಳು ಶೋಚನೀಯವಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದಿಪುರುಷ್ ಚಿತ್ರದ ಮೊದಲ ಟೀಸರ್ ಬಿಡುಗಡೆಯಾದಾಗ ಪರಿಸ್ಥಿತಿ ಹೇಗಿತ್ತೋ ಅದೇ ರೀತಿ ಇದೆ. ಚಿತ್ರ ತಂಡವು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗೆ ಗುರಿಯಾಗಿದೆ.
ಆದಿಪುರುಷ್ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣ ಕುಮಾರ್, ಓಂ ರೌತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ನಿರ್ಮಿಸಿದ್ದಾರೆ. ಒಟ್ಟಾರೆಯಾಗಿ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಆದಿಪುರುಷ್ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.