ಗೋದ್ರೆಜ್ ಕೈಗಾರಿಕೆಗಳ ಸಮೂಹದ ಚೇರ್ಮನ್ ಹಾಗೂ ನಿರ್ದೇಶಕರ ಮಂಡಳಿಯಿಂದ ಹಿರಿಯ ಕೈಗಾರಿಕೋದ್ಯಮಿ ಆದಿ ಗೋದ್ರೆಜ್ ನಿವೃತ್ತಿ ಘೋಷಿಸಿದ್ದಾರೆ. ಅಕ್ಟೋಬರ್ 1ರಿಂದ ಸಮೂಹದ ಚೇರ್ಮನ್ ಆಗಿ ಆದಿ ಕಿರಿಯ ಸಹೋದರ ನಾದಿರ್ ಗೋದ್ರೆಜ್ ಪದೋನ್ನತಿ ಹೊಂದಲಿದ್ದಾರೆ.
ಇದೇ ವೇಳೆ, ಗೋದ್ರೆಜ್ ಸಮೂಹದ ಚೇರ್ಮನ್ ಹಾಗೂ ಗೋದ್ರೆಜ್ ಕೈಗಾರಿಕೆಗಳ ಸಮೂಹದ ಎಮೆರೆಟಸ್ ಆಗಿ ಆದಿ ಮುಂದುವರೆಯಲಿದ್ದಾರೆ. ಸದ್ಯ ಗೋದ್ರೆಜ್ ಕೈಗಾರಿಕೆಗಳ ಸಮೂಹದ ವ್ಯವಸ್ಥಾಪಕ ನಿರ್ವಾಹಕರಾಗಿರುವ ನಾದಿರ್, ಸಮೂಹದ ಚೇರ್ಮನ್ ಹಾಗೂ ಎಂಡಿ ಆಗಿ ನೇಮಕವಾಗಿದ್ದಾರೆ.
ರಾತ್ರಿ ವೇಳೆ ಜನಿಸಿದವರು ನೀವಾಗಿದ್ದರೆ ಓದಿ ಈ ಸುದ್ದಿ
ಗೋದ್ರೆಜ್ ಸಮೂಹದ ಮಾತೃ ಸಂಸ್ಥೆಯಾದ ಗೋದ್ರೆಜ್ ಕೈಗಾರಿಕೆಗಳ ಸಮೂಹವು ಗ್ರಾಹಕ ಉತ್ಪನ್ನಗಳು, ರಿಯಲ್ ಎಸ್ಟೇಟ್, ಕೃಷಿ, ರಾಸಾಯನಿಕ ಹಾಗೂ ಆರ್ಥಿಕ ಸೇವೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ 18ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆ ಕಂಡಿದೆ.
ಜಿಐಎಲ್‌ನ ಚೇರ್ಮನ್ ಆಗಿ ಬಹುತೇಕ ನಾಲ್ಕು ದಶಕಗಳ ಮಟ್ಟಿಗೆ ಆದಿ ಗೋದ್ರೆಜ್ ಹುದ್ದೆ ನಿರ್ವಹಿಸಿದ್ದಾರೆ.