ಗರ್ಭಿಣಿಯರು ಭ್ರೂಣದ ಬೆಳವಣೆಗೆಗಾಗಿ ಸಾಮಾನ್ಯರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಬೇಕು. ಇಲ್ಲವಾದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಗರ್ಭಾವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯರು ಚೆನ್ನಾಗಿ ನೀರನ್ನು ಕುಡಿಯಿರಿ. ಇದರಿಂದ ದೇಹ ಹೈಡ್ರೀಕರಣಗೊಳ್ಳುತ್ತದೆ, ಇದರಿಂದ ಅವರು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
-ಗರ್ಭಿಣಿಯರು ಸರಿಯಾಗಿ ನೀರು ಕುಡಿದರೆ ದೇಹದಿಂದ ವಿಷವನ್ನು ಹೊರಹಾಕುವುದರ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
-ಜೀರ್ಣಾಂಗವ್ಯೂಹವನ್ನು ಸ್ವಚ್ಚಗೊಳಿಸಿ ನಿಮ್ಮ ದೇಹವು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
-ಕೊಬ್ಬು ಮತ್ತು ಎಣ್ಣೆಯಂಶವನ್ನು ಕರಗಿಸುತ್ತದೆ.
-ದೇಹವನ್ನು ಹೈಡ್ರೀಕರಿಸಿ ಕಾಯಿಲೆಗಳಿಂದ ದೂರವಿಡುತ್ತದೆ.
-ಮಲಬದ್ಧತೆಯನ್ನು ನಿವಾರಿಸಿ ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತದೆ.