ಎಷ್ಟೇ ಡಯಟ್ ಮಾಡಿದರೂ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದಿಲ್ಲ ಎಂದು ಬೇಸರಿಸುತ್ತಿದ್ದೀರಾ, ಹಾಗಿದ್ದರೆ ಇಲ್ಲಿ ಕೇಳಿ. ಯಾವುದೇ ಆಹಾರ ಸೇವಿಸದೆ ಖಾಲಿ ಹೊಟ್ಟೆಯಲ್ಲಿ ಇರುವುದು ಡಯಟ್ ಪ್ಲಾನ್ ನಲ್ಲಿ ತಪ್ಪು ಹೆಜ್ಜೆ. ಅದರ ಬದಲು ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಿ.
ಕಡಿಮೆ ಕ್ಯಾಲರಿ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ದೇಹತೂಕವನ್ನು ಕಡಿಮೆ ಮಾಡಬಹುದು. ಏನೂ ತಿನ್ನದೆ ಉಪವಾಸವಿದ್ದರೆ ಆರೋಗ್ಯ ಕೆಡುವುದೇ ಹೊರತು ದೇಹ ತೂಕ ಇಳಿಯುವುದಿಲ್ಲ.
ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡದಿದ್ದರೆ, ತಡವಾಗಿ ಎದ್ದರೂ ನಿಮ್ಮ ಡಯಟ್ ಪ್ಲಾನ್ ಕೆಲಸ ಮಾಡುವುದಿಲ್ಲ. ಹೊತ್ತಿಗೆ ಸರಿಯಾಗಿ ಮಲಗುವುದು ಮತ್ತು ಏಳುವುದು ಬಹಳ ಮುಖ್ಯ.
ಒತ್ತಡ ಹೆಚ್ಚಿದಂತೆ ದೇಹದಲ್ಲಿ ಫ್ಯಾಟ್ ಹೆಚ್ಚುತ್ತದೆ. ಹಾಗಾಗಿ ಆತಂಕದಿಂದ ದೂರವಿರಿ. ಅನಗತ್ಯ ಚಿಂತೆ ಮಾಡದಿರಿ. ಮದ್ಯಪಾನದ ಫ್ಯಾಟ್ ಅನ್ನು ಕರಗಿಸುವುದು ಮತ್ತೂ ಕಷ್ಟ. ಇದರ ಕೊಬ್ಬು ಹೊಟ್ಟೆಯ ಭಾಗದಲ್ಲೇ ಶೇಖರಣೆಯಾಗುತ್ತದೆ. ಹಾಗಾಗಿ ಮದ್ಯಪಾನದಿಂದ ದೂರವಿದ್ದಷ್ಟು ಒಳ್ಳೆಯದು.