ಲಾಸ್ ವೇಗಾಸ್‌ನಲ್ಲಿ ನಡೆದ ತನ್ನ ಸಂಗೀತ ಕಚೇರಿಯಲ್ಲಿ ಗಾಯಕಿ ಅಡೆಲೆ ಕಣ್ಣೀರು ಹಾಕುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಅದಕ್ಕೆ ಕಾರಣ, ಈಕೆ ಸೀಸರ್ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದ ವೇಳೆ ಅಲ್ಲಿ ನೆರೆದಿದ್ದ ಜನಸಂದಣಿಯ ಮೂಲಕ ನಡೆದುಕೊಂಡು ಹೋಗುತ್ತಿದ್ದಳು. ಆಗ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಫೋಟೋವನ್ನು ಮೊಬೈಲ್ನಲ್ಲಿ ತೋರಿಸುತ್ತಿದ್ದ. ಇದನ್ನು ನೋಡಿ ಅಡೆಲೆ ಕಣ್ಣೀರು ಹಾಕಿದ್ದಾಳೆ !
ಅಡೆಲೆ ಜನವರಿ 27 ರಂದು ತನ್ನ ಸಂಗೀತ ಕಛೇರಿ ನಡೆಸುತ್ತಿದ್ದ ವೇಳೆ ವೆನ್ ವಿ ವರ್ ಯಂಗ್ (ನಾವು ಯುವಕರಾಗಿದ್ದಾಗ…… )ಎನ್ನುವ ತನ್ನ ಹಿಟ್ ಹಾಡನ್ನು ಹಾಡುತ್ತಿದ್ದಳು. ಒಬ್ಬ ವಯಸ್ಸಾದ ವ್ಯಕ್ತಿ ತನ್ನ ಮೃತ ಹೆಂಡತಿಯ ಚಿತ್ರದೊಂದಿಗೆ ತನ್ನ ಫೋನ್ ಅನ್ನು ಹಿಡಿದಿರುವುದನ್ನು ಅವಳು ಗಮನಿಸಿದ್ದಾಳೆ. ನಂತರ, ಲೈಕ್ ಯೂ ಎಂಬ ತನ್ನ ಮತ್ತೊಂದು ಸೂಪರ್‌ಹಿಟ್ ಟ್ರ್ಯಾಕ್ ಅನ್ನು ಹಾಡಿ ಆ ವ್ಯಕ್ತಿಯನ್ನು ಸಮಾಧಾನಗೊಳಿಸಿದಳು. ಈ ಸಂದರ್ಭದಲ್ಲಿ ಆಕೆ ಭಾವುಕಳಾಗಿದ್ದಳು.
ನನ್ನ ಹಾಡಿನಿಂದ ಹಲವರು ಪ್ರೇರೇಪಿತರಾಗುತ್ತಿದ್ದಾರೆ. ನಾನು ಹಾಡುವಾಗ ತಮ್ಮ ಗತ ದಿನಗಳನ್ನು ನೆನೆಯುತ್ತಾರೆ. ಈ ವ್ಯಕ್ತಿ ಕೂಡ ನನ್ನ ಹಾಡಿಗೆ ಅವರ ಮೃತ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ. ಇದರಿಂದ ನಾನು ಜನರ ಮನಸ್ಸಿಗೆ ಎಷ್ಟು ಹತ್ತಿರವಾಗಿದ್ದೇನೆಂದು ತಿಳಿಯುತ್ತದೆ ಎಂದು ಅಡೆಲೆ ಹೇಳಿದ್ದಾಳೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 9.1 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.