ವಯಸ್ಸು ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತದೆ. ಚರ್ಮದ ಮೇಲೆ ಸುಕ್ಕು, ತಲೆಯಲ್ಲಿ ಬಿಳಿ ಕೂದಲು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಸೇವಿಸಿ.
*ನೆಲ್ಲಿಕಾಯಿ : ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಫ್ರೀ ರಾಡಿಕಲ್ಸ್ ಗಳಿಂದ ಚರ್ಮ ಹಾನಿಯಾಗುವುದನ್ನು ತಡೆಗಟ್ಟುತ್ತದೆ. ಹಾಗಾಗಿ ಪ್ರತಿದಿನ 1 ಕಪ್ ನೆಲ್ಲಿಕಾಯಿ ಜ್ಯೂಸ್ ಸೇವಿಸಿ.
*ನುಗ್ಗೆ ಎಲೆ : ಇದು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ನುಗ್ಗೆ ಎಲೆಯ ಪುಡಿಯನ್ನು ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸಿ.
*ಅಶ್ವಗಂಧ : ಇದು ಚರ್ಮದ ಕೋಶಗಳ ಪುನರುತ್ಪಾದನೆಗೆ ಸಹಾಯಕವಾಗಿದೆ. ಇದು ಚರ್ಮಕ್ಕೆ ಮೃದುತ್ವವನ್ನು ಕೊಡುತ್ತದೆ. ರಾತ್ರಿ ಮಲಗುವ ಮೊದಲು 1 ಗ್ಲಾಸ್ ಹಾಲಿಗೆ 1 ಚಮಚ ಅಶ್ವಗಂಧ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸಿ.
*ಬೇವು : ಇದು ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯ ಜೊತೆಗೆ ಬೇವಿನ ಪುಡಿ ಅಥವಾ ಎಣ್ಣೆಯನ್ನು ಚರ್ಮಕ್ಕೆ ಮಸಾಜ್ ಮಾಡಿ.