alex Certify ಅದಾನಿ ನಾಗಾಲೋಟ : ಒಂದೇ ವರ್ಷ 1 ಲಕ್ಷ ಕೋಟಿ ಸಂಪತ್ತು ಹೆಚ್ಚಳ, ಜಾಗತಿಕ ಸಿರಿವಂತರ ಗಳಿಕಾ ಪಟ್ಟಿಯಲ್ಲಿ ನಂ.1 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದಾನಿ ನಾಗಾಲೋಟ : ಒಂದೇ ವರ್ಷ 1 ಲಕ್ಷ ಕೋಟಿ ಸಂಪತ್ತು ಹೆಚ್ಚಳ, ಜಾಗತಿಕ ಸಿರಿವಂತರ ಗಳಿಕಾ ಪಟ್ಟಿಯಲ್ಲಿ ನಂ.1

ಭಾರತದ ಉದ್ಯಮ ಜಗತ್ತಿನಲ್ಲಿ ಅದಾನಿ (adani) ಸಮೂಹದ ಅಧ್ಯಕ್ಷ ಗೌತಮ್ ಅದಾನಿ (gautam adani) ಹೊಸ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಅವರ ಸಂಪತ್ತು ಬರೋಬ್ಬರಿ 1 ಲಕ್ಷ ಕೋಟಿ ಹೆಚ್ಚಳವಾಗಿದೆ.

ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸಂಪತ್ತು ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹುರುನ್ ಗ್ಲೋಬಲ್ (hurun global) ಸಂಸ್ಥೆಯ ವರದಿ ಪ್ರಕಾರ, ಅದಾನಿ ಅವರ ಆಸ್ತಿಯ ಒಟ್ಟು ಮೌಲ್ಯ ಈಗ 8.4 ಲಕ್ಷ ಕೋಟಿ ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಶತಕೋಟ್ಯಧಿಪತಿಗಳ (billionaires) ಸಂಖ್ಯೆ 284ಕ್ಕೆ ಏರಿದೆ. ಇವರೆಲ್ಲರ ಒಟ್ಟು ಸಂಪತ್ತು ದೇಶದ ಜಿಡಿಪಿಯ (GDP) ಮೂರನೇ ಒಂದು ಭಾಗದಷ್ಟಿದೆ.

ಎಚ್‌ಸಿಎಲ್ (HCL) ಕಂಪನಿಯ ಸಂಸ್ಥಾಪಕ ಶಿವ ನಾಡಾರ್ (shiva nadar) ತಮ್ಮ ಶೇ.47ರಷ್ಟು ಷೇರುಗಳನ್ನು ಪುತ್ರಿ ರೋಶನಿ ನಾಡಾರ್‌ಗೆ (roshani nadar) ನೀಡಿದ್ದಾರೆ. ಇದರಿಂದ ರೋಶನಿ ಅವರ ನಿವ್ವಳ ಸಂಪತ್ತಿನ ಮೌಲ್ಯ 3.5 ಲಕ್ಷ ಕೋಟಿ ಆಗಿದೆ. ಅವರು ಭಾರತದ ಅತಿದೊಡ್ಡ ಶ್ರೀಮಂತ ಮಹಿಳೆಯಾಗಿದ್ದು, ಜಾಗತಿಕ ಮಟ್ಟದಲ್ಲಿ 5ನೇ ಸಿರಿವಂತರಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...