ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಕ್ಕಳಿಗಾಗಿ ಐಸಿಯು ವೆಂಟಿಲೇಟರ್ ಹಾಸಿಗೆಗಳು ಮತ್ತು ಸಂಬಂಧಿಸಿದ ವೈದ್ಯಕೀಯ ಸಲಕರಣೆಯ ಖರೀದಿಗೆಂದು ಜಿಲ್ಲಾಡಳಿತಕ್ಕೆ 78.18 ಲಕ್ಷ ರೂಪಾಯಿಗಳನ್ನು ಅದಾನಿ ಸಮೂಹ ತನ್ನ ಪಾಲಿನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಿಂದ ಕೊಡುಗೆಯಾಗಿ ನೀಡಿದೆ.
ಒಮಿಕ್ರಾನ್ ರೂಪಾಂತರಿ ಕೋವಿಡ್ ವ್ಯಾಪಿಸುತ್ತಿರುವ ನಡುವೆ ಅದಾನಿ ಮಾಲೀಕತ್ವದ ಉಡುಪಿ ವಿದ್ಯತ್ ನಿಗಮ ನಿಯಮಿತ ಈ ನಿಧಿಯನ್ನು ಅದಾನಿ ಪ್ರತಿಷ್ಠಾನದ ಮೂಲಕ ಕೊಟ್ಟಿದೆ. ಜಿಲ್ಲೆಯಲ್ಲಿ ಶಾಖೋತ್ಪನ್ನ ವಿದ್ಯುತ್ ಘಟಕವೊಂದನ್ನು ಅದಾನಿ ನಿರ್ವಹಿಸುತ್ತಿದೆ.
ಬಡ ಜನತೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್
ಕೋವಿಡ್ ಮೂರನೇ ಅಲೆ ನಿರ್ವಹಣೆ ವೇಳೆ ಮಕ್ಕಳ ಶುಶ್ರೂಷೆಗೆಂದು ಈ ಅನುದಾನ ನೀಡಲಾಗಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಕೋವಿಡ್ ವಿರುದ್ಧದ ಹೋರಾಟಕ್ಕೆಂದು 40 ಲಕ್ಷ ರೂ.ಗಳನ್ನು ಅದಾನಿ ಸಮೂಹ ನೀಡಿತ್ತು.