ಸಾಲು ಸಾಲು ಸಿನಿಮಾ ಗಳಲ್ಲಿ ಬಿಜಿಯಾಗಿರುವ ಬಹುಭಾಷಾ ನಟಿ ವೇದಿಕಾ ಸಾಮಾಜಿಕ ಜಾಲತಾಣದಲ್ಲೂ ಸದಾ ಸಕ್ರಿಯರಾಗಿರುತ್ತಾರೆ. ನಟಿ ವೇದಿಕಾ ಇತ್ತೀಚಿಗಷ್ಟೇ ‘ಪೆಟ್ಟಾ ರಾಪ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಗ್ಲಾಮರ್ ಲುಕ್ ನಲ್ಲಿ ಮಿಂಚಿದ್ದು, ಇದರ ಫೋಟೋಗಳನ್ನು instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಲೈಕ್ಸ್ ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.
ನಟಿ ವೇದಿಕಾ ಇತ್ತೀಚಿಗೆ ನಟಿಸಿರುವ ‘ಪೆಟ್ಟಾ ರಾಪ್’ ‘ಫಿಯರ್’ ‘ಹಾಗೂ ವಿನೋದನ್’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೆ, ‘ಗಾನ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ ‘ಚೇತಿ ಮಂಧರಂ ತುಳಸಿ’ ಮತ್ತು ‘ಜಂಗಲ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.