ನಟಿ, ಮಾಡೆಲ್ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಾಣುವ ಫೋಟೋಗಳು ವೈರಲ್ ಆಗಿದೆ.
ನಟಿ ಉರ್ಫಿ ಆಸ್ಪತ್ರೆಯ ಬೆಡ್ ನಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು.. ಈ ನಟಿಗೆ ಏನಾಯಿತು ಎಂದು ಜನರು ಆತಂಕಗೊಂಡಿದ್ದಾರೆ.
ಪಬ್ಲಿಕ್ ಸ್ಥಳಗಳಲ್ಲಿ ವಿಚಿತ್ರ ವೇಷಭೂಷಣಗಳನ್ನು ತೊಡುವ ನಟಿ ಉರ್ಫಿ ಜಾವೇದ್ ಈಗಲೂ ಹಾಗೆಯೇ ಮಾಡಿಕೊಂಡಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಉರ್ಫಿಗೆ ಏನಾಯಿತು? ಗೊತ್ತಿಲ್ಲ. ಆದರೆ, ಆಸ್ಪತ್ರೆಯಲ್ಲಿ ಮಲಗಿರುವ ಫೋಟೋವನ್ನು ಅವರು ಇನ್ಸ್ಟಾಗ್ರಾಂ ನಲ್ಲಿ
ಪೋಸ್ಟ್ ಮಾಡಿದ್ದಾರೆ.