ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಇಂದು ತಮ್ಮ 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
1999 ರಲ್ಲಿ ಪ್ರವೀಣ್ ಕಾಂತ್ ನಿರ್ದೇಶನದ ‘ಜೋಡಿ’ ಚಿತ್ರದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 2002 ರಲ್ಲಿ ‘ಮೌನಂ ಪೆಸಿಯಾದೆ’ ನಲ್ಲಿ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡರು. ಇದಾದ ಬಳಿಕ ತ್ರಿಷಾ ಕೃಷ್ಣನ್ ಅವರಿಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆದವು.
2014ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ‘ಪವರ್’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟರು. ನಟಿ ತ್ರಿಶಾ ಕೃಷ್ಣನ್ ಅಂದಿನಿಂದ ಇಂದಿನವರೆಗೂ ಬೇಡಿಕೆಯ ನಟಿಯಾಗಿದ್ದು, ಇತ್ತೀಚಿಗೆ ‘ವಿದಾ ಮುಯಾರ್ಚಿ’ ‘ರಾಮ್’ ‘ಥಗ್ ಲೈಫ್’ ‘ವಿಶ್ವಂಭರ’ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.