
ದೀಪಕ್ ಗಾರ್ಗ್ ನಿರ್ದೇಶಿಸಿದ್ದ ಈ ಧಾರವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಶಿವನ ಪಾತ್ರದಲ್ಲಿ ಅಭಿನಯಿಸಿದ್ದಾರು. ಪ್ರಿಯಾಂಕಾ ಚಿಂಚೋಳಿ ಪಾರ್ವತಿಯಾದರೆ ಸತಿ ದಾಕ್ಷಾಯಿಣಿಯಾಗಿ ಸಂಗೀತ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಪಲ್ಲವಿ ಪುರೋಹಿತ್, ಆರ್ಯನ್ ರಾಜ್, ರಾಜೇಶ್ ರಾವ್, ನೇಹಾ ಸಕ್ಸೇನಾ, ಅರುಣ್ ಮೂರ್ತಿ, ಕಾರ್ತಿಕ್ ಸಾಮಗ್, ಅವಿತ್ ಶೆಟ್ಟಿ, ವಿನಾಯಕ್ ದೇಸಾಯಿ, ವಿಶಾಲ್ ಹೆಗಡೆ, ವೀಣಾ ಪೊನ್ನಪ್ಪ ಅರ್ಜುನ್ ನಗರಕರ್, ಬುಲೆಟ್ ಶ್ರೀನು, ಪವನ್ ಮಧುಕರ್, ರೋಹಿತ್ ನಾಗೇಶ್. ಉಳಿದ ದೇವತೆಗಳ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ ನಿಖಿಲ್ ಸಿನ್ಹಾ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದರು.