)
ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ನ ಬೇಡಿಕೆಯ ನಟಿ ಸಂಗೀತಾ ಶೃಂಗೇರಿ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಸತಿ ದಾಕ್ಷಾಯಿಣಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅದೇ ಸಮಯದಲ್ಲಿ ‘ಕರ್ಮ’ ಎಂಬ ಕಿರು ಚಿತ್ರದಲ್ಲಿ ಕಾಣಿಸಿಕೊಂಡರು.
ನಟಿ ಸಂಗೀತ ಶೃಂಗೇರಿ 2018 ರಂದು ‘A+’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಬಳಿಕ ‘ಸಾಲಗಾರ ಸಹಕಾರ ಸಂಘ’ ‘777 ಚಾರ್ಲಿ ‘ಮತ್ತು ಲಕ್ಕಿ ಮ್ಯಾನ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.
ಇತ್ತೀಚೆಗೆ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೇ ಇವರ ನಟನೆಯ ‘ಮಾರಿಗೋಲ್ಡ್’ ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಂಗೀತ ಶೃಂಗೇರಿ ಅವರಿಗೆ ಹಲವಾರು ಸಿನಿ ತಾರೆಯರು ವಿಶ್ ಮಾಡಿದ್ದಾರೆ.