ಹಿರಿಯ ನಟಿ ಹಾಗೂ ಗಾಯಕಿ ಸಲ್ಮಾ ಅಘಾ ಅವರ ಫೋನ್ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಬ್ಯಾಗ್ನ್ನು ಬೈಕ್ನಲ್ಲಿ ಬಂದ ಇಬ್ಬರು ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
65 ವರ್ಷ ವಯಸ್ಸಿನ ಸಲ್ಮಾ ಶನಿವಾರ ಬೆಳಗ್ಗೆ ತಮ್ಮ ಬಂಗಲೆಯಿಂದ ವರ್ಸೊವಾಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಬ್ಯಾಗ್ನ್ನು ಇಬ್ಬರು ದರೋಡೆಕೋರರು ಕಸಿದು ಎಸ್ಕೇಪ್ ಆಗಿದ್ದಾರೆ. ಹ್ಯಾಂಡ್ಬ್ಯಾಗ್ ಕಳುವಾಗುತ್ತಿದ್ದಂತೆಯೇ ಸಲ್ಮಾ ವರ್ಸೋವಾ ಠಾಣೆಗೆ ತೆರಳಿದ್ದಾರೆ. ಆದರೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಅಘಾ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಸಲ್ಮಾ, ಎರಡು ಮೊಬೈಲ್ಗಳು, ಸ್ವಲ್ಪ ಹಣ , ಕೀ ಸೇರಿದಂತೆ ವಿವಿಧ ವಸ್ತುಗಳು ನನ್ನ ಬ್ಯಾಗ್ನಲ್ಲಿದ್ದವು. ನನಗೆ ಎಫ್ಐಆರ್ ದಾಖಲಿಸಲು ಮೂರು ಗಂಟೆಯನ್ನು ತೆಗೆದುಕೊಂಡಿದ್ದಾರೆ. ಇಂದು ನಾನು ಟ್ವಿಟರ್ ಮೂಲಕ ಮುಂಬೈ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಈ ಸ್ಥಳದಲ್ಲಿ ನಡೆಯುತ್ತಿರುವ ಇಂತಹ ಕಳ್ಳತನದ ಘಟನೆಗಳು ಇದೇ ಮೊದಲೇನಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಫ್ಐಆರ್ ದಾಖಲಿಸಲು ವಿಳಂಬವಾದ ವಿಚಾರವಾಗಿ ಮಾತನಾಡಿದ ವರ್ಸೋವಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ, ಘಟನೆ ನಡೆದ ದಿನವೇ ಎಫ್ಐಆರ್ ದಾಖಲಾಗಿದೆ. ಆದರೆ ಸಲ್ಮಾ ಅವರೇ ನನ್ನ ಬಳಿ ಸಮಯವಿಲ್ಲ. ಹೀಗಾಗಿ ತಡವಾಗಿ ಬರುತ್ತೇನೆ ಎಂದು ಹೇಳಿದ್ದರು. ಆದರೂ ನಾವು ಆಕೆಯನ್ನು ಮತ್ತೊಮ್ಮೆ ಸಂಪರ್ಕಿಸಲು ಯತ್ನಿಸಿದೆವು. ಆದರೂ ಆವರು ಬರಲಿಲ್ಲ. ಹೀಗಾಗಿ ಅವರು ಪೊಲೀಸ್ ಠಾಣೆಗೆ ಬರುತ್ತಿದ್ದಂತೆಯೇ ಪ್ರಕರಣ ದಾಖಲಿಸಿದೆವು ಎಂದು ಹೇಳಿದ್ದಾರೆ.