ನವರಸ ನಾಯಕ ಜಗ್ಗೇಶ್ ಅಭಿನಯದ ‘ಸಾಫ್ಟ್ವೇರ್ ಗಂಡ’ ಚಿತ್ರದಲ್ಲಿ ನ್ಯಾನ್ಸಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದ ಬಹುಭಾಷಾ ನಟಿ ಸಾಕ್ಷಿ ಅಗರ್ವಾಲ್ ಮೊನ್ನೆ ಅಷ್ಟೇ 34ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಬೀಚ್ ನಲ್ಲಿ ಬಿಕಿನಿ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಂದ ಲೈಕ್ಸ್ ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.
2013ರಲ್ಲಿ ತೆರೆ ಕಂಡ ತಮಿಳಿನ ‘ರಾಜಾರಾಣಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ 2014ರಂದು ಜಗ್ಗೇಶ್ ನಟನೆಯ ‘ಸಾಫ್ಟ್ವೇರ್ ಗಂಡ’ ದಲ್ಲಿ ನ್ಯಾನ್ಸಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟರು. ಇತ್ತೀಚಿಗೆ ‘ಗೆಸ್ಟ್ ಚಾಪ್ಟರ್ 2’ ಹಾಗೂ ‘ದಿ ನೈಟ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.