![80 ಲಕ್ಷ ವಂಚಿಸಿ ಓಡಿ ಹೋದ ಮ್ಯಾನೇಜರ್: ಪ್ರಕರಣದ ರಹಸ್ಯ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು? | Rashmika Mandanna Finally Reveals Shocking Truth About her Ex-Manager: Know What ...](https://kannada.oneindia.com/img/2023/06/rashmika-1687526342.jpg)
ಟಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗದ ಬೇಡಿಕೆ ನಟಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2016ರಲ್ಲಿ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. ಬಳಿಕ 2017ರಲ್ಲಿ ‘ಅಂಜನಿಪುತ್ರ’ ಮತ್ತು ‘ಚಮಕ್’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು.
2018 ರಂದು ರಶ್ಮಿಕ ಮಂದಣ್ಣ ಅವರಿಗೆ ಟಾಲಿವುಡ್ ನ ‘ಚಲೋ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಂತರ ಟಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ಗಳೊಂದಿಗೆ ಅಭಿನಯಿಸಿದರು. ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸೇರಿದಂತೆ ‘ರೈನ್ಬೋ’ ಮತ್ತು ‘ದಿ ಗರ್ಲ್ ಫ್ರೆಂಡ್’ ಸೇರಿದಂತೆ ಹಿಂದಿಯ ‘ಚಾವ’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇಂದು ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬದ ಪ್ರಯುಕ್ತ ‘ದಿ ಗರ್ಲ್‌ಫ್ರೆಂಡ್’ ಟೀಸರ್ ಬಿಡುಗಡೆಯಾಗಲಿದೆ.