![](https://kannadadunia.com/wp-content/uploads/2024/11/83b33ab5-daa6-433b-bbe5-a58998156ae6.jpeg)
2013ರಲ್ಲಿ ತೆರೆಕಂಡ ‘ಮದ್ರಾಸ್ ಕೆಫೆ’ ಎಂಬ ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ರಾಶಿ ಖನ್ನಾ ತೆಲುಗಿನ ‘ಮನಂ’ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ‘ಊಹಾಲು ಗುಸಗುಸಲಾಡೆ’ ಸೇರಿದಂತೆ ಜೋರು ‘ಜಿಲ್’ ‘ಶಿವಂ’ ‘ಬೆಂಗಾಲ್ ಟೈಗರ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ನ ಜನಪ್ರಿಯ ನಟಿಯಾದರು.
ನಟಿ ರಾಶಿ ಖನ್ನಾ ‘ತೆಲುಗು’ ‘ತಮಿಳು’ ‘ಹಿಂದಿ’ ‘ಮಲಯಾಳಂ’ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಅಂದಿನಿಂದ ಹಿಂದಿನವರೆಗೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ‘ಸಬರಮತಿ ರಿಪೋರ್ಟ್’ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರು ಇತ್ತೀಚಿಗೆ ‘ತೆಲುಸು ಕದ’ ‘tme’ ‘ಅಘಾಥಿಯಾ‘ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.
ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿ ತಾರೆಯರು ರಾಶಿ ಖನ್ನಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.