ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಪ್ರಜ್ಞಾ ಜೈಸ್ವಾಲ್ ಫೋಟೋಶೂಟ್ನಲ್ಲಿ ಸಾಕಷ್ಟು ಬಿಜಿಯಾಗಿರುತ್ತಾರೆ. ಇತ್ತೀಚಿಗಷ್ಟೇ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು instagram ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಟಿ ಪ್ರಜ್ಞಾ ಜೈಸ್ವಾಲ್ ಸಕ್ಕತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಂದ ಹಾಟ್ ಬ್ಯೂಟಿಫುಲ್, ಗಾರ್ಜಿಯಸ್ ಹೀಗೆ ಹಲವಾರು ಕಮೆಂಟ್ಸ್ ಗಳು ಬಂದಿವೆ.
ಸಿನಿಮಾ ವಿಚಾರಕ್ಕೆ ಬಂದರೆ 2022 ರಲ್ಲಿ ತೆರೆಕಂಡ ‘ಸನ್ ಆಫ್ ಇಂಡಿಯಾ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಇವರು ಇತ್ತೀಚೆಗೆ ‘ಖೇಲ್ ಖೇಲ್ ಮೇ’ ನಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಪ್ರಜ್ಞಾ ಜೈಸ್ವಾಲ್ ಸೇರಿದಂತೆ ತಾಪ್ಸಿ ಪನ್ನು,ವಾಣಿ ಕಪೂರ್ ಮತ್ತು ಫರ್ದೀನ್ ಖಾನ್ ತೆರೆ ಹಂಚಿಕೊಂಡಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 15ಕ್ಕೆ ತೆರೆ ಕಾಣಲಿದೆ.