ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತೆರೆಕಂಡ ‘ಮುಗಮೂಡಿ’ ಎಂಬ ತಮಿಳು ಚಿತ್ರದ ಮೂಲಕ ಪೂಜಾ ಹೆಗ್ಡೆ ತಮ್ಮ ಸಿನಿಜರ್ನಿ ಆರಂಭಿಸಿದರು.
2017 ರಲ್ಲಿ ತೆರೆಕಂಡ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ದುವ್ವಾಡ ಜಗನ್ನಾಥಂ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ನಂತರ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಗೊಂಡರು.
ನಿದ್ರೆಗಣ್ಣಿನಲ್ಲಿ ಬಂದವಳಿಗೆ ಟಾಯ್ಲೆಟ್ ನಲ್ಲಿ ಕಂಡಿದ್ದೇನು…..?
ಪೂಜಾ ಹೆಗ್ಡೆ ಇತ್ತೀಚೆಗೆ ‘ಆಚಾರ್ಯ’ ‘ಸರ್ಕಸ್’ ಹಾಗೂ ಪ್ರಭಾಸ್ ನಟನೆಯ ‘ರಾಧೆಶ್ಯಾಮ್’ ಸೇರಿದಂತೆ ದಳಪತಿ ವಿಜಯ್ ಜೊತೆ ‘ಬೀಸ್ಟ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇಂದು ಇವರು ಅಭಿನಯಿಸಿರುವ ಸಿನಿಮಾಗಳ ಪೋಸ್ಟರ್ ಕೂಡ ಬಿಡುಗಡೆಯಾಗಲಿವೆ.