ಕನ್ನಡಿಗರ ಹೆಮ್ಮೆಯ ‘ಮೈಸೂರ್ ಸ್ಯಾಂಡಲ್’ ಉತ್ಪನ್ನಗಳ ಗುಣಗಾನ ಮಾಡಿದ ನಟಿ ಪೂಜಾ ಗಾಂಧಿ 29-05-2024 8:51PM IST / No Comments / Posted In: Karnataka, Latest News, Live News ಕರ್ನಾಟಕದ ಹೆಮ್ಮೆಯ ಉತ್ಪನ್ನವಾದ ‘ಮೈಸೂರು ಸ್ಯಾಂಡಲ್’ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡಿಗರ ಈ ಹೆಮ್ಮೆಯ ಉತ್ಪನ್ನವನ್ನು ನಟಿ ಪೂಜಾ ಗಾಂಧಿ ಹಾಡಿ ಹೊಗಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಟಿ ಪೂಜಾ ಗಾಂಧಿ, ಇತ್ತೀಚೆಗೆ ಪತ್ರಿಕೆ ಒಂದರಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ ತನ್ನ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ದ್ವಿಗುಣಗೊಳಿಸಿರುವ ವರದಿ ಈ ನೆಲದ ಕೈಗಾರಿಕೆ ಮತ್ತು ಉತ್ಪನ್ನಗಳ ಶ್ರೇಷ್ಠತೆಗೆ ಸಾಕ್ಷಿ ಎಂದಿದ್ದಾರೆ. ಆಗಾಗ್ಗೆ ಬೇರೆ ಸೋಪ್ ಗಳ ಮೋಹಕ್ಕೆ ಒಳಗಾದರೂ, ಮತ್ತೆ ಮತ್ತೆ ಕಾಡುವ ಪ್ರೀತಿಯಂತೆ ಮನೆ – ಮನ ಸೇರುವ, ಶತಮಾನದ ಇತಿಹಾಸ, ಅತ್ಯುತ್ತಮ ಸುಗಂಧ ಮತ್ತು ನಿರಂತರ ಗುಣಮಟ್ಟದ ಸ್ಥಿರತೆಯಿಂದಾಗಿ ಕನ್ನಡಿಗರೆಲ್ಲರ ಹೆಮ್ಮೆಯಾಗಿರುವ ಮೈಸೂರು ಸ್ಯಾಂಡಲ್ ಸೋಪ್ ನ ಬಗ್ಗೆ ತಮ್ಮ ಭಾವನೆ, ಅಭಿಪ್ರಾಯ ಮತ್ತು ನೆನಪುಗಳಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ ಎಂದು ಮೂಲಕ ಕನ್ನಡ ಅಕ್ಷರದಲ್ಲಿ ಬರೆದಿದ್ದಾರೆ.