
ಬಾಲಿವುಡ್ ನಟಿ ಪೂಜಾ ಭಟ್ ಅವರಿಗೆ ಮಾರ್ಚ್ 24ರಂದು ಬೆಳಗ್ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಹೇಳಿದ್ದಾರೆ. ನಟಿ ತಮಗೆ ಪಾಸಿಟಿವ್ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ.
ಸರಿಯಾಗಿ ಮೂರು ವರ್ಷದ ನಂತರ ಮೊದಲ ಬಾರಿಗೆ ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಮಾಸ್ಕ್ ಧರಿಸಿ. ಕೊರೋನಾ ನಮ್ಮ ಸುತ್ತ ಮುತ್ತ ಇದೆ. ವ್ಯಾಕ್ಸಿನ್ ಪಡೆಯಿರಿ. ನಾನು ಶೀಘ್ರ ಗುಣಮುಖಳಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ನಟಿ ಟ್ವೀಟ್ ಮಾಡಿದ್ದಾರೆ.
ಎಲ್ಲರೂ ಮಾಸ್ಕ್ ಧರಿಸಿ ಕೊರೋನಾ ಇನ್ನೂ ಮುಗಿದಿಲ್ಲ ಎಂದು ಪೂಜಾ ಭಟ್ ಹೇಳಿದ್ದು, ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ನಟಿಯ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಭಿಮಾನಿಗಳು, ಅವರ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.