
ಪಾಕಿಸ್ತಾನದ ನಟಿ ನಾದಿಯಾ ಖಾನ್ ಈಗ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ಪಾಕಿಸ್ತಾನದ ನಟರು ಭಾರತೀಯ ಚಿತ್ರಗಳಲ್ಲಿ ನಟಿಸಿದರೆ ತಮ್ಮ ಜನಪ್ರಿಯತೆ ಎಲ್ಲಿ ಕುಸಿಯುತ್ತದೋ ಎಂಬ ಕಾರಣಕ್ಕೆ ಬಾಲಿವುಡ್ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್, ಪಾಕಿಸ್ತಾನದ ನಟರ ಮೇಲೆ ನಿಷೇಧ ಸೇರುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫುಲ್ ವೈರಲ್ ಆಗಿದ್ದು, ಸಂದರ್ಶನ ಒಂದರಲ್ಲಿ ಮಾತನಾಡಿರುವ ನಾದಿಯಾ ಖಾನ್, ಈಗ ನಮ್ಮ ನಟರು (ಪಾಕಿಸ್ತಾನದ ನಟರು) ಜನಪ್ರಿಯತೆ ಗಳಿಸುತ್ತಿದ್ದಾರೆ. ಫವಾದ್ ಖಾನ್ ಅಲ್ಪ ಕಾಲದಲ್ಲೇ ಅಲ್ಲಿ ಹೆಸರು ಗಳಿಸಿದ್ದಾರೆ. ಇದು ಬಾಲಿವುಡ್ ನಲ್ಲಿ ಈಗಾಗಲೇ ಹೆಸರು ಗಳಿಸಿರುವ ಅಲ್ಲಿನ ನಟರಿಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಪಾಕಿಸ್ತಾನದ ನಟರ ಮೇಲೆ ನಿಷೇಧ ಹೇರುವಂತೆ ಮಾಡಲು ಅವರುಗಳು ಯಶಸ್ವಿ ಆಗುತ್ತಿದ್ದು, ಇದರಲ್ಲಿ ಕೇವಲ ರಾಜಕೀಯ ಮಾತ್ರವಲ್ಲ, ಅಲ್ಲಿನ ಪ್ರಮುಖ ನಟರ ಪಾತ್ರವೂ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಪಾಕಿಸ್ತಾನದ ಹಲವು ನಿರ್ದೇಶಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರುಗಳನ್ನು ಹಾಡಿ ಹೊಗಳಿದ್ದಾರೆ.
https://twitter.com/ashilikeit/status/1775469426181320833?ref_src=twsrc%5Etfw%7Ctwcamp%5Etweetembed%7Ctwterm%5E1775469426181320833%7Ctwgr%5E532e6226ce18ce6d9c8249e57e6f915110a8d621%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ffirstpost-epaper-dh3247ec5afa764c30a76aeba1f4968b09%2Factressnadiakhansaysshahrukhkhanaamirkhansalmankhangotpakistaniactorsbannedinindiafawadkhanbeganworkingtherewhichmadethekhans-newsid-n598143374