ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಬಂದಿದ್ರು. ಮಂಗಳವಾರ ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಪೂಜೆ ಮಾಡಿದ್ರು. ಇಂದೂ ಕೂಡಾ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಮಾಸ್ಕ್ ಹಾಕೊಂಡು, ತಲೆಗೆ ಬಟ್ಟೆ ಹಾಕೊಂಡು ಪೂಜೆಯಲ್ಲಿ ಕೂತಿದ್ರು. ಆದ್ರೂ ಜನ ಗುರುತು ಹಿಡಿದರು. ಪ್ರಸಾದ ತಗೊಳೋವಾಗಾನೂ ಮಾಧ್ಯಮದವರ ಕಣ್ಣು ತಪ್ಪಿಸಿ ಹೋದ್ರು. ಅವರ ಜೊತೆ ಮಹಿಳೆಯೊಬ್ಬರು ಬಾಡಿಗಾರ್ಡ್ ತರ ಇದ್ರು.
ವಿಡಿಯೋ ಮಾಡೋಕೆ ಹೋದವರಿಗೆಲ್ಲಾ ಅವರ ಜೊತೆಗಿದ್ದವರು ಗಲಾಟೆ ಮಾಡಿದ್ರು. ವಿಡಿಯೋ ಮಾಡಿದ ಪತ್ರಕರ್ತರೊಬ್ಬರ ಫೋನನ್ನು ಅವರ ಜೊತೆಗಿದ್ದ ಮಹಿಳೆ ಕಿತ್ಕೊಂಡ್ರು.
ಕತ್ರಿನಾ ಕುಕ್ಕೆ ಸುಬ್ರಹ್ಮಣ್ಯದ ಒಂದು ಪ್ರೈವೇಟ್ ರೂಮಲ್ಲಿ ಇದ್ರು. ಬೆಳಗ್ಗೆ ಆರು ಗಂಟೆಗೆ ಎರಡನೇ ದಿನದ ಪೂಜೆ ಮಾಡಿದ್ದಾರೆ.
ಅವರ ಫ್ಯಾಮಿಲಿಗೆ ಒಳ್ಳೇದಾಗಲಿ ಅಂತ ಪೂಜೆ ಮಾಡಿದ್ರು. ಸರ್ಪಸಂಸ್ಕಾರದ ಮುಖ್ಯ ಅರ್ಚಕ ನಂದಕಿಶೋರ್, ಕ್ರಿಯಾಕರ್ತೃ ಸುಧೀರ್ ಭಟ್ ಪೂಜೆ ಮಾಡಿಸಿದ್ರು. ಒಬ್ಬ ತಮಿಳು ಡೈರೆಕ್ಟರ್ ಹೇಳಿದ್ರಂತೆ, ಅದಕ್ಕೆ ಕತ್ರಿನಾ ಕುಕ್ಕೆಗೆ ಬಂದು ಸರ್ಪಸಂಸ್ಕಾರ ಸೇವೆ ಮಾಡಿದ್ರಂತೆ.