
1992ರಲ್ಲಿ ತೆರೆ ಕಂಡ ಆಕ್ಷನ್ ಡ್ರಾಮ ಕಥಾದಾರಿತ ‘ಬೇಖುದಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಕಾಜೋಲ್ 1993 ರಲ್ಲಿ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ನಟನೆಯ ಬಾಜಿಗರ್ ನಲ್ಲಿ ಪ್ರಿಯಾ ಚೋಪ್ರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ‘ಯೇ ದಿಲ್ಲಗಿ’ ‘ಉಧಾರ್ ಕಿ ಜಿಂದಗಿ’ ‘ಕರಣ್ ಅರ್ಜುನ್’ ‘ತಾಕತ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.
ಕಳೆದ ವರ್ಷ ಲಾಸ್ಟ್ ಸ್ಟೋರೀಸ್ 2 ದಲ್ಲಿ ತೆರೆ ಹಂಚಿಕೊಂಡಿದ್ದ ಕಾಜೋಲ್ ಇತ್ತೀಚಿಗೆ ‘ಸರ್ಜಮೀನ್’ ಸೇರಿದಂತೆ ‘ದೋ ಪಟ್ಟಿ’ ‘ಮಾ’ ಸೇರಿದಂತೆ ಚರಣ್ ತೇಜ್ ಉಪ್ಪಲಪಾಟಿ ನಿರ್ದೇಶನದ ‘ಮಹಾರಾಗ್ನಿ: ಕ್ವೀನ್ ಆಫ್ ಕ್ವೀನ್ಸ್’ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.