ಸ್ಯಾಂಡಲ್ ವುಡ್ ನ ಹಿರಿಯ ನಟ ರಾಮಕುಮಾರ್ ಪುತ್ರಿ ಧನ್ಯ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2021 ರಲ್ಲಿ ತೆರೆ ಕಂಡ ‘ನಿನ್ನ ಸನಿಹಕೆ’ ಎಂಬ ರೋಮ್ಯಾಂಟಿಕ್ ಕಾಮಿಡಿ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಸುಮಾರು ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.
2024 ಇವರ ಅದೃಷ್ಟ ವರ್ಷವೆಂದರೆ ತಪ್ಪಾಗಲಾರದು. ‘ಹೈಡ್ ಅಂಡ್ ಸೀಕ್’ ಸೇರಿದಂತೆ ‘ದಿ ಜಡ್ಜ್ಮೆಂಟ್’ ‘ಪೌಡರ್’ ‘ಕಾಲಾಪತ್ತರ್’ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡವು.
ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ನಟ – ನಟಿಯರು ಧನ್ಯ ರಾಮ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.