ಕನ್ನಡ ಸೇರಿದಂತೆ ತಮಿಳು ಚಿತ್ರರಂಗದ ಬೇಡಿಕೆಯ ನಟಿಯಾಗಿರುವ ಚೈತ್ರ ಆಚಾರ್ ಇತ್ತೀಚಿಗಷ್ಟೇ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸಿದ್ದು, instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಚೈತ್ರ ಆಚಾರ್ ತಮ್ಮ ಹಾಟ್ ಅವತಾರದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಚೈತ್ರ ಆಚಾರ್ ಅವರ ಫೋಟೋಗಳಿಗೆ ಫಿದಾ ಆಗಿದ್ದಾರೆ.
2019ರಲ್ಲಿ ತೆರೆಕಂಡ ‘ಮಹಿರಾ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಬಳಿಕ ಸಾಕಷ್ಟು ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು. ಇತ್ತೀಚಿಗೆ ‘ಸ್ಟ್ರಾಬೆರಿ’ ಮತ್ತು ‘ಉತ್ತರಕಾಂಡ’ ಸೇರಿದಂತೆ ತಮಿಳಿನಲ್ಲಿ ಸಿದ್ದಾರ್ಥ್ ಅವರ 40ನೇ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.