
ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಭಾವನಾ ಮೆನನ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ನಟಿ ಭಾವನಾ 2002ರಲ್ಲಿ ತೆರೆ ಕಂಡ ಮಲಯಾಳಂನ ‘ನಮ್ಮಲ್’ ಚಿತ್ರದಲ್ಲಿ ಸಣ್ಣ ಪಾತ್ರ ಒಂದರಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು ತಿಲಕ್ಕಂ’ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.
2010ರಲ್ಲಿ ರಿಲೀಸ್ ಆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ‘ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಬಳಿಕ ‘ವಿಷ್ಣುವರ್ಧನ’ ‘ಟೋಪಿವಾಲಾ’ ‘ರೋಮಿಯೋ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಕಳೆದ ವರ್ಷ ವಿಜಯ ರಾಘವೇಂದ್ರ ನಟನೆಯ ‘ಚೇಸ್ ಆಫ್ ಕೊಂಡಾಣ’ ದಲ್ಲಿ ಕಾಣಿಸಿಕೊಂಡಿದ್ದ ಇವರು ಇತ್ತೀಚಿಗೆ ‘ಪಿಂಕ್ ನೋಟ್’ ಮತ್ತು ಉತ್ತರಕಾಂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಮಲಯಾಳಂ ನ ಹಂಟ್ ಮತ್ತು ತಮಿಳಿನ ‘ದಿ ಡೋರ್’ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.