alex Certify ನಟಿ ಖಾಸಗಿ ವಿಡಿಯೋ ಕಳಿಸಿ ಬ್ಲಾಕ್ ಮೇಲ್: ಮೇಕಪ್ ಮ್ಯಾನ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಖಾಸಗಿ ವಿಡಿಯೋ ಕಳಿಸಿ ಬ್ಲಾಕ್ ಮೇಲ್: ಮೇಕಪ್ ಮ್ಯಾನ್ ಅರೆಸ್ಟ್

ಬೆಂಗಳೂರು: ಕನ್ನಡ ಚಲನಚಿತ್ರ ನಟಿಯ ಖಾಸಗಿ ವಿಡಿಯೋ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೇಕಪ್ ಮ್ಯಾನ್ ಬಂಧಿತನಾಗಿದ್ದಾನೆ.

ಆರ್.ಟಿ. ನಗರ ಭುವನೇಶ್ವರಿ ನಗರ ನಿವಾಸಿ ಮಹಾಂತೇಶ್(37) ಬಂಧಿತ ಆರೋಪಿ. ನಟಿಯ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಹಾಂತೇಶ್ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಮೊಬೈಲ್ ಕೊಟ್ಟು ಹೋಗುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ನಟಿಯ ಖಾಸಗಿ, ಫೋಟೋ ವಿಡಿಯೋಗಳನ್ನು ತನ್ನ ವಾಟ್ಸಾಪ್ ಖಾತೆಗೆ ವರ್ಗಾಯಿಸಿಕೊಂಡಿದ್ದ.

ನಂತರ ಹೊಸ ಸಿಮ್ ಕಾರ್ಡ್ ಖರೀದಿಸಿ ಅನಾಮಧೇಯ ವ್ಯಕ್ತಿಯ ರೀತಿಯಲ್ಲಿ ನಟಿಗೆ ಸಂದೇಶ ಕಳುಹಿಸಿ ನಿನ್ನ ಬೆತ್ತಲೆ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇದ್ದು, 30 ಲಕ್ಷ ರೂಪಾಯಿ ಕೊಡದಿದ್ದರೆ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆದರೆ, ಇದಕ್ಕೆ ನಟಿ ತಲೆ ಕೆಡಿಸಿಕೊಂಡಿರಲಿಲ್ಲ. ಬಳಿಕ ಆಕೆಯ ವಾಟ್ಸಾಪ್ ಗೆ ಖಾಸಗಿ, ವಿಡಿಯೋ ಕಳುಹಿಸಿದ್ದಾನೆ. ತನ್ನದೇ ಖಾಸಗಿ ವಿಡಿಯೋ, ಫೋಟೋ ನೋಡುತ್ತಿದ್ದಂತೆ ನಟಿಗೆ ಶಾಕ್ ಆಗಿದ್ದು, ಈಶಾನ್ಯ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಆರ್ ಸಂತೋಷ್ ರಾಮ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ಮಹಾಂತೇಶನನ್ನು ಬಂಧಿಸುವವರೆಗೆ ಬ್ಲಾಕ್ ಮೇಲ್ ಆರೋಪಿಯೇ ತನ್ನ ಮೇಕಪ್ ಮ್ಯಾನ್ ಎಂಬುದು ನಟಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...