alex Certify 28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ನ ಬೇಡಿಕೆಯ ನಟಿ ಅಮೃತ ಅಯ್ಯಂಗಾರ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2017 ರಲ್ಲಿ ತೆರೆಕಂಡ ವಿಕ್ರಂ ಕುಮಾರ್ ನಿರ್ದೇಶನದ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರದಲ್ಲಿ ಸೋನು ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. 2019 ರಂದು ”ಅನುಷ್ಕಾ” ಸಿನಿಮಾದಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಲವ್ ಮಾಕ್ಟೇಲ್’ ನಲ್ಲಿ ಜೋಶಿತಾ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.

ನಟಿ ಅಮೃತ ಅಯ್ಯಂಗಾರ್ ಕಳೆದ ವರ್ಷ ‘ಗುರುದೇವ್ ಹೊಯ್ಸಳ’ ಹಾಗೂ ‘ಅಬ್ಬಬ್ಬಾ‘ ದಲ್ಲಿ ತೆರೆ ಹಂಚಿಕೊಂಡಿದ್ದು,  ಇತ್ತೀಚಿಗೆ ‘ಜೀಬ್ರಾ’  ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.  ಈಗಾಗಲೇ  ಮತ್ತೊಂದು ಸಿನಿಮಾ ಬಗ್ಗೆ  ಘೋಷಣೆಯಾಗಿದ್ದು, ಇದರ ಶೀರ್ಷಿಕೆ ಇಂದು ಅನಾವರಣಗೊಳ್ಳುವ ಸಾಧ್ಯತೆ ಇದೆ.

ಇಂದು ಸಾಮಾಜಿಕ ಜಾಲತಾಣದಲ್ಲಿ  ಹಲವಾರು ಸಿನಿ ತಾರೆಯರು ಅಮೃತ ಅಯ್ಯಂಗಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...