ಬಳ್ಳಾರಿ : ರಾಕಿಂಗ್ ಸ್ಟಾರ್ ನಟ ಯಶ್ ಅವರ ಬೆಂಗಾವಲು ವಾಹನದ ಚಕ್ರವು ಹರಿದ ಪರಿಣಾಮ ಅಭಿಮಾನಿಯೊಬ್ಬರು ಗಾಯಗೊಂಡಿರುವ ಘಟನೆ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ ನಲ್ಲಿ ನಡೆದಿತ್ತು.
ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿದ್ದರು. ಈ ವೇಳೆ ಯಶ್ ಅವರನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದರು. ಯಶ್ ತೆರಳುವ ವೇಳೆ ಅವರ ಕಾರನ್ನು ಅಭಿಮಾನಿಗಳು ಹಿಂಬಾಲಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಕಾಲಿನ ಮೇಲೆ ಯಶ್ ಬೆಂಗಾವಲು ವಾಹನ ಹರಿದಿತ್ತು.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಉಮೇಶ್ ಎಂಬ ಯುವಕನ ಕಾಲಿನ ಮೇಲೆ ಯಶ್ ಬೆಂಗಾವಲು ವಾಹನದ ಚಕ್ರ ಹರಿದಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ಯುವಕ ಉಮೇಶ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಯಶ್ ಬೆಂಗಾವಲು ವಾಹನದ ಚಾಲಕನಿಗೆ ಶಿಕ್ಷೆ ಆಗಬೇಕೆಂದು ಉಮೇಶ್ ಆಗ್ರಹಿಸಿದ್ದಾರೆ.