ಬೆಂಗಳೂರು : ನಟ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದ್ದು, ಟಾಕ್ಸಿಕ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ.
ಇಂದು (ಜ.8) ಬೆಳಗ್ಗೆ 10 ಗಂಟೆಗೆ ಟಾಕ್ಸಿಕ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಯಶ್ ಅವರು ಸಿನಿಮಾದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ನಶೆ ತುಂಬಿರುವ ಪಾರ್ಟಿಗೆ ಎಂಟ್ರಿ ಕೊಟ್ಟು ಹೆಂಡ ಸುರಿಯುವ ಸೀನ್ ಸಖತ್ ಮಸ್ತ್ ಆಗಿ ತೋರಿಸಲಾಗಿದೆ. ಬರ್ತ್ ಡೇ ಪೀಕ್ ಎಂಬ ಹೆಸರಿನಲ್ಲಿ ಈ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.