ನಿರ್ದೇಶಕ ಅಮರ್ ಕೌಶಿಕ್ ಅವರ ಮುಂಬರುವ ಪೌರಾಣಿಕ ಚಿತ್ರ ಮಹಾವತಾರ್ ನಲ್ಲಿ ನಟ ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಸದ್ಯ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ಚಿತ್ರದಲ್ಲಿ ವಿಕ್ಕಿಯ ಲುಕ್ ಅನ್ನು ಎರಡು ಫೋಟೋಗಳಲ್ಲಿ ಅನಾವರಣಗೊಳಿಸಲಾಗಿದೆ. ಚಿತ್ರಗಳ ಜೊತೆಗೆ ಸಂಕ್ಷಿಪ್ತ ಕ್ಲಿಪ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ವಿಕ್ಕಿ ಉದ್ದನೆಯ ಕೂದಲು ಮತ್ತು ಗಡ್ಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್ ನಲ್ಲಿ ವಿಕ್ಕಿ ಕೌಶಲ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
![](https://kannadadunia.com/wp-content/uploads/2024/11/Untitled-11.jpg)
ಈ ಚಿತ್ರವು ನಿರ್ಮಾಪಕ ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿಂದ ಬಂದಿದೆ. ಇದರಲ್ಲಿ ವಿಕ್ಕಿ ಚಿರಂಜೀವಿ ಪರಶುರಾಮ, “ಧರ್ಮದ ಶಾಶ್ವತ ಯೋಧ” ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಾವತಾರ್ 2026 ರ ಕ್ರಿಸ್ ಮಸ್ ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.