ತಮ್ಮ ವಿಚಿತ್ರ ವಸ್ತ್ರಗಳಿಂದ್ಲೇ ಗಮನ ಸೆಳೆಯುತ್ತಿರುವ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಭಾರತೀಯ ಜನತಾ ಪಕ್ಷದ ನಾಯಕಿ ಚಿತ್ರಾ ಕಿಶೋರ್ ವಾಘ್ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಡ್ರೆಸ್ ಬಗ್ಗೆ ಬಿಜೆಪಿ ನಾಯಕಿ ಚಿತ್ರಾ ಕಿಶೋರ್ ನೀಡಿದ್ದ ಹೇಳಿಕೆ ಕುರಿತು ಕ್ರಮಕ್ಕೆ ಒತ್ತಾಯಿಸಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಉರ್ಫಿ ಜಾವೇದ್ ಅವರಿಗೆ ಹಾನಿಯಾಗುವಂತೆ ಬೆದರಿಕೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಚಿತ್ರಾ ಕಿಶೋರ್ ವಾಘ್ ವಿರುದ್ಧ ದೂರು ದಾಖಲಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (CrPC) ಸಂಬಂಧಿತ ವಿಭಾಗದ ಅಡಿಯಲ್ಲಿ ತಡೆಗಟ್ಟುವ ಕ್ರಮವನ್ನು ಕೋರಿರುವುದಾಗಿ ಉರ್ಫಿ ಪರ ವಕೀಲರು ಹೇಳಿದ್ದಾರೆ.
ಜನವರಿ 4 ರಂದು ಬಿಜೆಪಿ ನಾಯಕಿ, ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಟೀಕಿಸಿ ಟ್ವೀಟ್ ಮಾಡಿದ್ದರು. ಮಹಿಳಾ ಆಯೋಗವು ಇದಕ್ಕೆ ಏನಾದರೂ ಮಾಡುತ್ತದೆಯೇ ಅಥವಾ ಇಲ್ಲವೇ ಎಂದು ಕೇಳಿದ್ದರು.
ಅರೆಬೆತ್ತಲೆ ಮಹಿಳೆಯರು ಬೀದಿಗಳಲ್ಲಿ ಬಹಿರಂಗವಾಗಿ ನಡೆಯುತ್ತಾರೆ, ಮಹಿಳಾ ಆಯೋಗವೇ ಈ ಬಗ್ಗೆ ಗಮನ ಹರಿಸುತ್ತಿಲ್ಲ ಏಕೆ ? ಪ್ರತಿಭಟನೆಯು ಉರ್ಫಿ ವಿರುದ್ಧ ಅಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ತಿರುಗಾಡುವ ಧೋರಣೆಯ ವಿರುದ್ಧವಾಗಿದೆ. ಈ ಬಗ್ಗೆ ಮಹಿಳಾ ಆಯೋಗ ಏನಾದರು ಮಾಡಬೇಕೆಂದು ಬಿಜೆಪಿ ನಾಯಕಿ ಕೇಳಿದ್ದರು.