ಸರ್ಕಸ್, ಶಾಂತಿಯಂತಹ ಖ್ಯಾತ ಟಿವಿ ಸೀರಿಯಲ್ ಮತ್ತು ಸರ್ಫರೋಶ್ನಂತಹ ಚಲನಚಿತ್ರಗಳಿಗೆ ಹೆಸರಾದ ಖ್ಯಾತ ನಟ ಸುನೀಲ್ ಶೆಂಡೆ ಸೋಮವಾರ ಮುಂಬೈನಲ್ಲಿ ನಿಧನರಾಗಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ. 70 ರ ವಯಸ್ಸಿನ ನಟ ಸುನೀಲ್ ಶೆಂಡೆ ಮುಂಬೈನ ವಿಲೆ ಪಾರ್ಲೆ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಚಲನಚಿತ್ರ ಮತ್ತು ಸಂಗೀತ ವಿಮರ್ಶಕ ಪವನ್ ಝಾ ತಿಳಿಸಿದ್ದಾರೆ.
ಅವರು ನಿನ್ನೆ ರಾತ್ರಿ 1 ಗಂಟೆಗೆ ವಿಲೆ ಪಾರ್ಲೆಯಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು ಮತ್ತು ಅವರ ಪಾರ್ಥಿವ ಶರೀರವನ್ನು ಪಾರ್ಶಿವಾಡದ ಹಿಂದೂ ಸ್ಮಶಾನದಲ್ಲಿ ಇಂದು ಮಧ್ಯಾಹ್ನ ಸಂಸ್ಕಾರ ನಡೆಸಲಾಯಿತು ಎಂದು ಪವನ್ ಝಾ ಹೇಳಿದರು. ಶೆಂಡೆ ಅವರ ಸಾವಿಗೆ ಕಾರಣ ತಕ್ಷಣವೇ ತಿಳಿದುಬಂದಿಲ್ಲ.
ತಮ್ಮ 30 ವರ್ಷಗಳ ವೃತ್ತಿಜೀವನದಲ್ಲಿ ಶೆಂಡೆ ಅವರು ಗಾಂಧಿ, ಖಳ್ ನಾಯಕ್, ಘಾಯಲ್, ಜಿದ್ದಿ, ದೌಡ್, ಮಗನ್ ಮತ್ತು ವಿರುದ್ಧ್ನಂತಹ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಸುನೀಲ್ ಶೆಂಡೆ ಅವರು ಅಮೀರ್ ಖಾನ್ ಅಭಿನಯದ ಸರ್ಫರೋಶ್ನಲ್ಲಿ ಪೊಲೀಸ್ ಉಪ ಆಯುಕ್ತರಾಗಿ ಮತ್ತು ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಅವರು ಅಭಿನಯದ ಜಮೀನ್ನಲ್ಲಿ ರಾಜಕಾರಣಿಯಾಗಿ ನಟಿಸಿದ್ದಾರೆ.