ಬೆಂಗಳೂರು : ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಬಂದಿರುವ ನಟ ಶಿವರಾಜ್ ಕುಮಾರ್ ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಹೌದು, ಅವರು ತಮ್ಮ ಇಷ್ಟದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ.
ಇದೀಗ 29 ವರ್ಷಗಳ ನಂತರ ಪ್ರಸಿದ್ದ ಪ್ರವಾಸಿ ತಾಣ ಯಾಣಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ನಮ್ಮೂರ ಮಂದಾರ ಹೂವೇ ಸಿನಿಮಾದಲ್ಲಿ ಶಿವಣ್ಣ, ಪ್ರೇಮ, ರಮೇಶ್ ಜೋಡಿ ಕಮಾಲ್ ಮಾಡಿತ್ತು. ಈ ಸಿನಿಮಾದ ದೃಶ್ಯವೊಂದನ್ನು ಯಾಣದಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ ಆ ಸ್ಥಳಕ್ಕೆ ಶಿವಣ್ಣ-ಗೀತಾ ದಂಪತಿ ವಿಸಿಟ್ ಕೊಟ್ಟಿದ್ದಾರೆ. ಬರೋಬ್ಬರಿ 29 ವರ್ಷಗಳ ನಂತರ ಪ್ರಸಿದ್ದ ಪ್ರವಾಸಿ ತಾಣ ಯಾಣಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ.
ನಮ್ಮೂರ ಮಂದಾರ ಹೂವೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 1996 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಶಿವ ರಾಜಕುಮಾರ್ , ರಮೇಶ್ ಅರವಿಂದ್ ಮತ್ತು ಪ್ರೇಮಾ ಪ್ರಮುಖ ಪಾತ್ರಗಳಲ್ಲಿನಟಿಸಿದ್ದಾರೆ. ಸಾರ್ವಕಾಲಿಕ ಬ್ಲಾಕ್ಬಸ್ಟರ್ ರೊಮ್ಯಾಂಟಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ನಟ ಶಿವ ರಾಜ್ಕುಮಾರ್, ರಮೇಶ್ ಅರವಿಂದ್ ಮತ್ತು ಪ್ರೇಮಾ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಚಲನಚಿತ್ರವಾಗಿದೆ. ಸಿನಿಮಾದ ಹಾಡುಗಳಂತೂ ಇಂದಿಗೂ ಜನರ ಬಾಯಲ್ಲಿ ಗುನುಗುತ್ತಿದೆ.