ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್ ಅಶ್ವತ್ಥ್ ತಮ್ಮ 67ನೇ ವಯಸ್ಸಿನಲ್ಲಿಯೂ ವಿದ್ಯಾರ್ಥಿಗಳು ನಾಚುವಂತೆ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಂಕರ್ ಅಶ್ವತ್ಥ್ ಅವರ ಅದ್ಭುತ ನೃತ್ಯದ ವಿಡಿಯೋ ಭಾರಿ ವೈರಲ್ ಆಗಿದೆ.
ಈ ಬಗ್ಗೆ ಸ್ವತಃ ಶಂಕರ್ ಅಶ್ವತ್ಥ್ ಮಾಹಿತಿ ಹಂಚಿಕೊಂಡಿದ್ದು, ನಮ್ಮನೆ PG ಯಲ್ಲಿ ಇರುವ ಇಂಜನಿಯರಿಂಗ್, ಸೈನ್ಸ್ ಹಾಗೂ ಆಯುರ್ವೇದಿಕ್ ಓದುತ್ತಿರುವ ಮಕ್ಕಳು ಕೆಲವರು ತಮ್ಮಲ್ಲಿರುವ ಪ್ರತಿಭೆ ತೋರಿಸಲು ನಾಚಿಕೆ ಭಯಪಡುತ್ತಿದ್ದರು. ಆಗ ಅವರಿಗೆ ಆ ಚಳಿ ಬಿಡಿಸಲು ನನಗೆ ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ ಹಾಗೂ ನನಗೆ 67ನೇ ವರ್ಷ ನಮ್ಮ ಪ್ರತಿಭೆ ತೋರುವ ಅವಕಾಶ ಸಿಕ್ಕಾಗ ಹಿಂಜರಿಯಬಾರದೆಂದು ಅವರ ಮುಂದೆ ಈ ರೀತಿ ನೃತ್ಯ ಮಾಡಿ ತೋರಿಸಿದೆ. ಆಮೇಲೆ ಅವರು ಭಯದಿಂದ ಹೊರ ಬಂದು ತಮ್ಮ ಪ್ರತಿಭೆಗಳನ್ನು ತೋರಿಸಿದರು ಎಂದು ಸಂತಸ ಹಂಚಿಕೊಂಡಿದ್ದಾರೆ.
‘ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ’ ಎಂಬ ಹಾಡಿಗೆ ಹಿರಿಯ ನಟ ಶಂಕರ್ ಅಶ್ವಥ್ ಅವರ ನೃತ್ಯ ಯುವ ಜನತೆಯನ್ನೂ ಬೆರಗುಗೊಳಿಸುವಂತಿದೆ.