ನಟಿ ರೋಜಾ ಅಶ್ಲೀಲ ವಿಡಿಯೋ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿಯ ಮಾಜಿ ಸಚಿವ ಬಂಡಾರು ಸತ್ಯನಾರಾಯಣರನ್ನು ಬಂಧಿಸಲಾಗಿದೆ.
ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಟೈಮ್ ಬಂದಾಗ ರಿಲೀಸ್ ಮಾಡುತ್ತೇನೆ ಎಂದು ಬಂಡಾರು ಹೇಳಿದ್ದರು. ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಆಪ್ತರಾಗಿರುವ ಬಂಡಾರು ಅವರು ನಾಯ್ಡು ಅವರ ಬಗ್ಗೆ ಅವಹೇಳನಕಾರಿಯಾಗಿ ರೋಜಾ ಮಾತನಾಡುವುದನ್ನು ನಿಲ್ಲಿಸದಿದ್ದರೆ ರೋಜಾ ಅವರ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಂಡಾರು ಸತ್ಯನಾರಾಯಣ ಅವರನ್ನು ಆಂಧ್ರಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈಸಿಪಿ ಸಚಿವೆ ರೋಜಾ ಅವರ ಬಗ್ಗೆ ಬಂಡಾರು ಸತ್ಯನಾರಾಯಣ ಅವರು ಅಸಹ್ಯಕರ ಹೇಳಿಕೆ ನೀಡಿದ ಕಾರಣ, ಅವರನ್ನು ಬಂಧಿಸಲಾಯಿತು. ಬಂಡಾರು ರೋಜಾ ಮೇಲೆ ವೈಯಕ್ತಿಕವಾಗಿ ಅನೇಕ ಆರೋಪ ಮಾಡಿದ್ದರು. ಪೊಲೀಸರು ಅವರ ಮನೆಯ ಬಾಗಿಲುಗಳನ್ನು ಮುರಿದು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿದೆ.