ಕುಂದಾಪುರ: ನಟ, ನಿರ್ದೇಶಕ ರಿಶಬ್ ಶೆಟ್ಟಿ ತಾವು ಓದಿದ ಶಾಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಕುಂದಾಪುರದ ಕೆರಾಡಿ ಶಾಲೆಯನ್ನು ರಿಷಬ್ ಶೆಟ್ಟಿ ಫೌಂಡೇಶನ್ ವತಿಯಿಂದ ಅಭಿವೃದ್ಧಿಪಡಿಸಿ ಮಾದರಿ ಶಾಲೆಯಾಗಿ ರೂಪಿಸಲು ಮುಂದಾಗಿದ್ದಾರೆ.
ಶನಿವಾರ ಅಭಿವೃದ್ಧಿ ಯೋಜನೆ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಿಶಬ್ ಶೆಟ್ಟಿ, ನಾನು ಸರ್ಕಾರಿ ಶಾಲೆಯಲ್ಲಿ ಓದಿ ಓದಿದ್ದೇನೆ. ಅನೇಕ ಸಾಧಕರು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಕೆರಾಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಕಲೆ, ಕ್ರೀಡೆಯ, ಯೋಗ, ವ್ಯಕ್ತಿತ್ವ ವಿಕಸನ, ವಾಹನ ವ್ಯವಸ್ಥೆ ಮಾಡಲಾಗುವುದು. ಮಾದರಿಯಾಗಿ ಕನ್ನಡ ಶಾಲೆಯನ್ನು ರೂಪಿಸಬೇಕೆಂಬ ಗುರಿ ಹೊಂದಿದ್ದು, ರಿಷಬ್ ಶೆಟ್ಟಿ ಫೌಂಡೇಶನ್ ವತಿಯಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಾಲೆಯ ಸರ್ವಜ್ಞನ ಪ್ರಗತಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.