ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದೀಗ ನಟನಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.
ಮಹಿಳೆಯರ ಭಾವನೆಗಳನ್ನು ನೋಯಿಸಿದ ಪ್ರಕರಣದಲ್ಲಿ ಆಗಸ್ಟ್ 22 ರಂದು ಮುಂಬೈ ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಟ ರಣವೀರ್ ಸಿಂಗ್ ಗೆ ಇನ್ನೂ ಸಮನ್ಸ್ ತಲುಪಿಲ್ಲ. ಅವರು ಬೇರೆ ದೇಶದಲ್ಲಿರುವ ಕಾರಣ, ಆಗಸ್ಟ್ 16 ರಂದು ಚೆಂಬೂರ್ ಪೊಲೀಸರು ಅವರಿಗೆ ನೋಟಿಸ್ ನೀಡಲಿದ್ದಾರೆ.
ರಣವೀರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509, 292, ಮತ್ತು 294 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೂರ್ವ ಮುಂಬೈ ಉಪನಗರದಲ್ಲಿರುವ ಸರ್ಕಾರೇತರ ಸಂಸ್ಥೆಯ (ಎನ್ಜಿಒ) ಪದಾಧಿಕಾರಿ ಮತ್ತು ಮಹಿಳಾ ವಕೀಲರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಟ ತನ್ನ ನಗ್ನ ಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಎನ್ಜಿಒ ಪದಾಧಿಕಾರಿ ತಿಳಿಸಿದ್ದಾರೆ. ಪೇಪರ್ ಮ್ಯಾಗಜೀನ್ ವೊಂದು ರಣವೀರ್ ಸಿಂಗ್ ರ ನಗ್ನ ಫೋಟೋಶೂಟ್ ಮಾಡಿಸಿತ್ತು.