alex Certify 41ನೇ ವಸಂತಕ್ಕೆ ಕಾಲಿಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

41ನೇ ವಸಂತಕ್ಕೆ ಕಾಲಿಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Rakshith Shetty : ಸದ್ಯದಲ್ಲೇ ನಟ ರಕ್ಷಿತ್ ಶೆಟ್ಟಿ ಮದುವೆ ?! ಇವರೇನಾ ಸಿಂಪಲ್ ಸ್ಟಾರ್ ಕೈ ಹಿಡಿಯೋ ಲಕ್ಕಿ ಗರ್ಲ್ ?!

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ೪೧ ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

2010ರಂದು ಬಿಡುಗಡೆಯಾದ ‘ನಮ್ ಏರಿಯಾಲ್ ಒಂದ್ ದಿನ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ರಕ್ಷಿತ್ ಶೆಟ್ಟಿ ಅವರಿಗೆ ಭರ್ಜರಿ ಯಶಸ್ಸು ತಂದು ಕೊಟ್ಟ ಸಿನಿಮಾವೆಂದರೆ  2013ರಲ್ಲಿ ತೆರೆಕಂಡ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ಬಳಿಕ ‘ಉಳಿದವರು ಕಂಡಂತೆ’ ಚಿತ್ರವನ್ನು  ನಟಿಸಿ ನಿರ್ದೇಶಿಸಿದರು.

ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡು ಭಾಗಗಳು ಕಳೆದ ವರ್ಷ ಸೂಪರ್ ಡೂಪರ್ ಹಿಟ್ ಆಗಿದ್ದು, ಇತ್ತೀಚಿಗೆ ‘ರಿಚರ್ಡ್ ಆಂಟನಿ’ ಹಾಗೂ ‘ಏಕಂ’ ಎಂಬ ವೆಬ್ ಸೀರೀಸ್ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಇದರ ಪೋಸ್ಟರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...