alex Certify ಮೈಸೂರು ‘ಶಕ್ತಿಧಾಮ’ದ ಆಧಾರ ಸ್ತಂಭವಾಗಿದ್ದರು ಪುನೀತ್ ರಾಜ್​ಕುಮಾರ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು ‘ಶಕ್ತಿಧಾಮ’ದ ಆಧಾರ ಸ್ತಂಭವಾಗಿದ್ದರು ಪುನೀತ್ ರಾಜ್​ಕುಮಾರ್​​..!

ಪುನೀತ್​ ರಾಜ್​ಕುಮಾರ್​​​ ತಾವು ಶಾಲೆಗಳಿಗೆ ಹೋಗಿ ಕಲಿತದ್ದು ಕಡಿಮೆಯಾದರೂ ಸಹ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿದ್ದಂತವರು. ಮೈಸೂರಿನಲ್ಲಿರುವ ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವಾದ ಶಕ್ತಿಧಾಮ ಡಾ.ರಾಜ್​ ಕುಟುಂಬದ ಕನಸಾಗಿತ್ತು.

ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸಲು ಪುನೀತ್​ ರಾಜ್​ಕುಮಾರ್​ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬಂದ ಸಂಪಾದನೆಯಿಂದ 18 ಲಕ್ಷ ರೂಪಾಯಿಗಳನ್ನು ಶಕ್ರಿಧಾಮಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದರು.

ಪ್ರತಿ ವರ್ಷ ಇಲ್ಲಿನ ಮಕ್ಕಳಿಗೆ ಪುಸ್ತಕ ಹಾಗೂ ಇತರೆ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುತ್ತಿದ್ದ ಪುನೀತ್​ ರಾಜ್​ಕುಮಾರ್​ ಶಕ್ತಿಧಾಮಕ್ಕೆ ಸೇರಿದ್ದ 3 ಎಕರೆ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಯೋಜನೆ ರೂಪಿಸಿದ್ದರು. ಈ ಶಿಕ್ಷಣ ಸಂಸ್ಥೆಗೆ ಸುಮಾರು 8 ಕೋಟಿ ರೂಪಾಯಿಯನ್ನೂ ಅಪ್ಪು ಮೀಸಲಿಟ್ಟಿದ್ದರು.

ಕೋವಿಡ್​ಗೂ ಮುನ್ನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದ ಪವರ್​ ಸ್ಟಾರ್​ ಇಲ್ಲಿನ ಮಕ್ಕಳ ಜೊತೆ ಸಮಯ ಕಳೆದಿದ್ದರು. ಇಲ್ಲಿನ ಮಕ್ಕಳ ಜೊತೆ ಕೂತು ಊಟ ಸವಿಯವುದು ಅಂದರೆ ಅಪ್ಪುಗೆ ತುಂಬಾನೇ ಅಚ್ಚುಮೆಚ್ಚು. ಹೀಗಾಗಿ ಇಲ್ಲಿಗೆ ಬಂದಾಗೆಲ್ಲ ಒಳ್ಳೆಯ ಊಟ ತರಿಸಿ ಮಕ್ಕಳ ಜೊತೆ ಕುಳಿತು ಅದನ್ನು ಸವಿಯುತ್ತಿದ್ದರು. ಪುನೀತ್​ ರಾಜ್​ಕುಮಾರ್​​ರ ಈ ಕನಸಿಗೆ ಶಿವಣ್ಣ ಕೂಡ ಸಾಥ್​ ನೀಡಿದ್ದರು.

ಪುನೀತ್​ ರಾಜ್​ಕುಮಾರ್​ ಅಗಲಿಕೆ ವಾರ್ತೆ ಕೇಳಿದ ಬಳಿಕ ಶಕ್ತಿಧಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಪುನೀತ್​​ ನಮ್ಮನ್ನೆಲ್ಲ ಬಿಟ್ಟು ತೆರಳಿರೋದು ಶಕ್ತಿಧಾಮ ಹಾಗೂ ಇಡೀ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್​ ಭಾವುಕರಾಗಿ ಹೇಳಿಕೆ ನೀಡಿದ್ರು.

ತಮ್ಮ ಪಾಲಿಗೆ ದಾರಿದೀಪವಾಗಿದ್ದ ಪುನೀತ್​ ರಾಜ್​ಕುಮಾರ್​ ನಿಧನ ಇಲ್ಲಿನ ಮಕ್ಕಳಿಗೆ ದೊಡ್ಡ ಆಘಾತವನ್ನೇ ತಂದಿದೆ. ಅಪ್ಪುವಿನ ನಿಧನ ವಾರ್ತೆ ಕೇಳುತ್ತಿದ್ದಂತೆಯೇ ಊಟ ತಿಂಡಿ ಬಿಟ್ಟು ಕೂತ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಪವರ್​ ಸ್ಟಾರ್​​ಗೆ ಶ್ರದ್ದಾಂಜಲಿ ಅರ್ಪಿಸುವ ಸಲುವಾಗಿ ಗೊಂಬೆ ಹೇಳುತೈತೆ….. ಮತ್ತೆ ಹೇಳುತೈತೆ ಹಾಡನ್ನು ಸಾಮೂಹಿಕ ಹಾಡುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

https://youtu.be/Q1j5qg0pFXQ?t=1

https://youtu.be/jrMkNeHJ8qE?t=4

 

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...