![](https://kannadadunia.com/wp-content/uploads/2023/01/FotoJet-36-6-1024x683.jpg)
ಮುಂಬೈ ವಿಮಾನ ನಿಲ್ದಾಣದಲ್ಲಿ ದೃಷ್ಟಿಹೀನ ಪ್ರಯಾಣಿಕರಿಗೆ ಸಿಐಎಸ್ಎಫ್ ಸಿಬ್ಬಂದಿ ನೆರವಾದ ಬಗ್ಗೆ ಪೋಸ್ಟ್ ನಲ್ಲಿ ಪರ್ವಿನ್ ದಬಾಸ್ ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಸೆಲ್ಫಿಯನ್ನು ಸಹ ಹಂಚಿಕೊಂಡಿದ್ದಾರೆ.
ಸನ್ನಿ ಸುಲಾನಿಯಾ ಎಂಬ ಸಿಬ್ಬಂದಿ ಭಾಗಶಃ ಕಣ್ಣು ಕಾಣದ ಪ್ರಯಾಣಿಕರಿಗೆ ಸಹಾಯ ಮಾಡಲು ಅವರನ್ನು ಮೂತ್ರಾಲಯಕ್ಕೆ ಕರೆದೊಯ್ದರು. ಅವರು ಶೌಚ ಮುಗಿಸುವವರೆಗೂ ಆ ವ್ಯಕ್ತಿಗಾಗಿ ಕಾಯುತ್ತಿದ್ದರು. ಮತ್ತು ಪ್ರಯಾಣಿಕನು ಕೈ ತೊಳೆದುಕೊಳ್ಳಲು ಸಹ ಅವರು ಸಹಾಯ ಮಾಡಿದರು. ನಂತರ ಸುಲಾನಿಯಾ ಆ ವ್ಯಕ್ತಿಯನ್ನು ಅವರ ಸಹಚರನ ಬಳಿಗೆ ಕರೆದೊಯ್ದರು. ಎಂದು ಪೋಸ್ಟ್ ಮಾಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಈ ಘಟನೆ ನಡೆದಿದೆ ಎಂದು ದಬಾಸ್ ಪ್ರತ್ಯೇಕ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿ ನೆರವಿನ ಬಗ್ಗೆ ಹಾಗು ಅವರ ಕಾರ್ಯವನ್ನು ಮೆಚ್ಚಿ ಪೋಸ್ಟ್ ಮಾಡಿದ ನಟನನ್ನ ನೆಟ್ಟಿಗರು ಕೊಂಡಾಡಿದ್ದಾರೆ.