![Nithin pens a heartfelt note about 20 years of his film career](https://www.newstap.in/h-upload/2022/06/14/1371793-img-20220614-wa0036.webp)
ಟಾಲಿವುಡ್ ನ ಖ್ಯಾತ ನಟ ನಿತಿನ್ ಇಂದು ತಮ್ಮ 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ, 2002ರಲ್ಲಿ ತೆರೆಕಂಡ ತೇಜಾ ನಿರ್ದೇಶನದ ಜಯಂ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. 2003 ರಲ್ಲಿ ‘ದಿಲ್’ ಚಿತ್ರದಲ್ಲಿ ತೆರೆ ಹಂಚಿಕೊಂಡರು.
ನಟ ನಿತಿನ್ ಟಾಲಿವುಡ್ ಚಿತ್ರರಂಗದಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ್ದು, ನಿರ್ಮಾಪಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಿತಿನ್ ಇತ್ತೀಚೆಗೆ ‘ತಮ್ಮುಡು’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದು, ಇದರ ಬೆನ್ನಲ್ಲೇ ‘ರಾಬಿನ್ ವುಡ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ತಮ್ಮುಡು’ ಚಿತ್ರತಂಡ ನಿತಿನ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇಂದು ಟಾಲಿವುಡ್ ಚಿತ್ರರಂಗದ ಹಲವಾರು ಸಿನಿ ತಾರೆಯರು ನಿತಿನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
![](https://img.republicworld.com/rimages/THAMMUDU-1711772509210.webp?tr=w-1280)