alex Certify ನಟಿ ಕಾರು ಅಡ್ಡಗಟ್ಟಿ ಗನ್‌ ಹಿಡಿದು ಬೆದರಿಸಿದ ದರೋಡೆಕೋರರು…! 7 ಲಕ್ಷ ರೂ. ನಗದು ದೋಚಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕಾರು ಅಡ್ಡಗಟ್ಟಿ ಗನ್‌ ಹಿಡಿದು ಬೆದರಿಸಿದ ದರೋಡೆಕೋರರು…! 7 ಲಕ್ಷ ರೂ. ನಗದು ದೋಚಿ ಪರಾರಿ

ನಟಿ ನಿಖಿತಾ ರಾವಲ್​ಗೆ ಬಂದೂಕು ಹಿಡಿದು ಬೆದರಿಸಿದ ದರೋಡೆಕೋರರು ಬರೋಬ್ಬರಿ 7 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. 2008ರಲ್ಲಿ ಅನಿಲ್​ ಕಪೂರ್​ ಮುಖ್ಯಭೂಮಿಕೆಯ ಬ್ಲಾಕ್​ & ವೈಟ್​ ಸಿನಿಮಾದಲ್ಲಿ ನಟಿ ನಿಖಿತಾ ರಾವಲ್​ ನಟಿಸಿದ್ದಾರೆ.

ದರೋಡೆ ವಿಚಾರವಾಗಿ ಮಾತನಾಡಿದ ನಿಖಿತಾ, ಚಿಕ್ಕಮ್ಮನೊಂದಿಗೆ ನಾನು ಶಾಸ್ತ್ರಿ ನಗರದ ಮನೆಯಲ್ಲಿ ವಾಸವಿದ್ದೆ. ದೆಹಲಿಯಲ್ಲಿ ನನಗೆ ಶೂಟಿಂಗ್​ ಶೆಡ್ಯೂಲ್​ ಫಿಕ್ಸ್​ ಆಗಿತ್ತು. ಮುಖಕ್ಕೆ ಮಾಸ್ಕ್​ ಧರಿಸಿದ್ದ ದರೋಡೆಕೋರರು ಮನೆಯ ಸಮೀಪ ನನ್ನನ್ನು ಅಡ್ಡಗಟ್ಟಿ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಧಮ್ಕಿ ಹಾಕಿದರು. ದರೋಡೆಕೋರರು ಬಂದೂಕು ಹಿಡಿದು ಬೆದರಿಸಿದ ಹಿನ್ನೆಲೆಯಲ್ಲಿ ನನ್ನ ಬಳಿಯಿದ್ದ 7 ಲಕ್ಷ ರೂಪಾಯಿಗಳನ್ನು ಅವರಿಗೆ ನೀಡಿದೆ. ಈ ಘಟನೆಯ ಬಳಿಕ ನಾನು ಬದುಕಿದ್ದೇನೆ ಎಂದು ನನಗೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ದರೋಡೆ ನಡೆಯುವ ವೇಳೆ ನಿಖಿತಾರ ಚಿಕ್ಕಮ್ಮ ಕೂಡ ಮನೆಯಲ್ಲಿ ಇರಲಿಲ್ಲ. ತಮ್ಮ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ತಾವು ವಾರ್ಡ್​ರೋಬ್​ನಲ್ಲಿ ಅವಿತಿದ್ದಾಗಿ ನಿಖಿತಾ ಹೇಳಿದ್ದಾರೆ.

ರಾತ್ರಿ 10 ಗಂಟೆ ಸುಮಾರಿಗೆ ನಿಖಿತಾ ತಮ್ಮ ಚಿಕ್ಕಮ್ಮನ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅತ್ಯಂತ ವೇಗವಾಗಿ ಬಂದ ಟೊಯೋಟಾ ಇನ್ನೋವಾ ಕಾರು ನಿಖಿತಾರ ವಾಹನವನ್ನು ಅಡ್ಡಗಟ್ಟಿದೆ. ಕಾರಿನಿಂದ ಇಳಿದು ಬಂದ ಮುಖವಾಡ ಧರಿಸಿದ್ದ ನಾಲ್ವರು ಬಂದೂಕು ಹಿಡಿದು ಬೆದರಿಕೆ ಹಾಕಿದ್ದರು.

ಇದರಿಂದ ಭಯಗೊಂಡ ನಿಖಿತಾ ತಮ್ಮ ಬಳಿ ಇದ್ದ 7 ಲಕ್ಷ ರೂಪಾಯಿ ನಗದು, ಉಂಗುರ, ಕಿವಿಯೋಲೆ ವಜ್ರದ ಪದಕ, ವಾಚ್ ನೀಡಿದ್ದಾಗಿ ಹೇಳಿದ್ದಾರೆ.

ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹೇಳಿಕೆ ನೀಡುವ ಮೂಲಕ ನಿಖಿತಾ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈ ಪ್ರಕರಣದಲ್ಲಿ ಅನಗತ್ಯವಾಗಿ ಶಿಲ್ಪಾ ಶೆಟ್ಟಿ ಹೆಸರನ್ನು ಎಳೆಯಲಾಗುತ್ತಿದೆ ಎಂದು ನಿಖಿತಾ ಹೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...